Mandya Maths STF 2013-14 Report

From Karnataka Open Educational Resources
Jump to navigation Jump to search

2013-14 ನೇ ಸಾಲಿನ ಗಣಿತ ಎಸ್.ಟಿ.ಎಫ್. ತರಬೇತಿಯ ವರದಿ

2013-14 ನೇ ಸಾಲಿನ ಎಸ್.ಟಿ.ಎಫ್. ಗಣಿತ ವಿಷಯದ ತರಬೇತಿಯು ದಿನಾಂಕ : 05.11.2013 ರಿಂದ 08.11.2013 ರ ವರೆಗೆ ಮೊದಲನೇ ಹಂತದ ಹಾಗೂ ದಿನಾಂಕ: 11.11.2013 ರಿಂದ 15.11.2013 ರ ವರೆಗೆ ಎರಡನೇ ಹಂತದ ತರಬೇತಿ ಹಾಗೂ ದಿನಾಂಕ 18.11.2013 ರಿಂದ 22.11.2013 ರವರೆಗೆ ಮೂ ರನೇ ಹಂತದ ತರಬೇತಿ ಡಯಟ್ ನಲ್ಲಿ ನಡೆಯಿತು . ಮೊದಲನೇ ದಿನ ಶಿಕ್ಷಕರ ನೋಂದಣಿ ಮಾಡಿಕೊಂಡು , ನಂತರ ಡಯಟ್ ನ ಪ್ರಾಂಶುಪಾಲರಾದ ಶ್ರೀಮತಿ ಸು ಮಂಗಲಾ ರವರು ಹಾಗೂ ಉಪಪ್ರಾಂಶು ಪಾಲರಾದ ಶ್ರೀ ಕಾಂತರಾಜು ಕೆ. ರವರು ತರಬೇತಿಯನ್ನು ಉದ್ಘಾಟಿಸಿದರು .

ನಂತರ ತರಬೇತಿಗೆ ಹಾಜರಾಗಿರು ವ ಶಿಕ್ಷಕರ ಪರಸ್ಪರ ಪರಿಚಯದ ನಂತರ ,ಶಿಕ್ಷಕರನ್ನು ಐದು ಗುಂಪುಗಳನ್ನಾಗಿ ವಿಂಗಡಿಸಲಾಯಿತು. ಇದಾದ ಮೇಲೆ ತರಬೇತಿಯ ಉದ್ದೇಶ ವನ್ನು ನಿರೂ ಪಿಸಿ, KOER ನ ಬಗ್ಗೆ ಮಾಹಿತಿ ನೀಡಲಾಯಿತು . ಮದ್ಯಾಹ್ನದ ಅವಧಿಯಲ್ಲಿ ಉಬುಂ ಟು ವಿನ ವಿವಿಧ ಅಪ್ಲಿಕೇಷನ್ ಗಳ ಪುನಸ್ಮರಣೆ ಮಾಡಿಕೊಳ್ಳಲಾಯಿತು .

ಎರಡನೇ ದಿನದ ತರಬೇತಿಯಲ್ಲಿ ಫ್ರೀ-ಮೈಂಡ್ ನ ರಚನೆಯನ್ನು ತಿಳಿಸಿ , ಗ್ರಾಫಿಕಲ್ ಲಿಂಕ್, ಹೈಪರ್ ಲಿಂಕ್ ನೀಡು ವುದು ತಿಳಿಸಲಾಯಿತು . ನಂತರ ಶಿಕ್ಷಕರಿಗೆ, ವಿವಿಧ ವಿಷಯಗಳನ್ನು ನೀಡಿ , ಫ್ರೀ-ಮೈಂಡ್ ತಯಾರಿಸಲು ಅವಕಾಶ ಕಲ್ಪಿಸಲಾಯಿತು ಮತ್ತು ಅದನ್ನು ಪ್ರೊಜೆಕ್ಟರ್ ನ ಮೂ ಲಕ ಎಲ್ಲರ ಸಮ್ಮುಖದಲ್ಲಿ ವಿವರಣೆಯನ್ನು ಪಡೆಯಲಾಯಿತು . ಮದ್ಯಾಹ್ನದ ಅವಧಿಯಲ್ಲಿ ಜಿಯೋಜಿಬ್ರಾದ ಬಗ್ಗೆ ಮಾಹಿತಿಯನ್ನು ನೀಡಿ ಅದನ್ನು ಪ್ರಾಯೋಗಿಕವಾಗಿ ಕಲಿಯಲು ಅವಕಾಶ ನೀಡಲಾಯಿತು .

ಮೂ ರನೇ ದಿನದ ತರಬೇತಿಯಲ್ಲಿ ಎಲ್ಲರ ಈ-ಮೇಲ್ ಇದೆಯೇ? ಎಂಬು ದನ್ನು ಪರೀಕ್ಷಿಸಿ, ಈ-ಮೇಲ್ ಐಡಿ ರಚಿಸು ವುದನ್ನು ತಿಳಿಸಿಕೊಡಲಾಯಿತು . ನಂತರ ಈ-ಮೇಲ್ ಐಡಿ ಹೊಂದದ ಶಿಕ್ಷಕರು ತಮ್ಮ ತಮ್ಮ ಈ-ಮೇಲ್ ಐಡಿಯನ್ನು ಸ್ವತಃ ರಚಿಸಿಕೊಂಡರು . ಇದಾದ ಮೇಲೆ KOER ನ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿ, ಅದರೊಂದಿಗೆ ಗಣಿತಕ್ಕೆ ಸಂಬಂದಿಸಿದ ಬೇರೆ ಬೇರೆ ವೆಬ್ ಸೈಟ್ ನ ಬಗ್ಗೆ ತಿಳಿಸಿ, ಈ ಎಲ್ಲಾ ವೆಬ್ ಸೈಟ್ ನ್ನು ಹು ಡು ಕಲು ಹಾಗೂ ಅದರಲ್ಲಿರು ವ ಮಾಹಿತಿಯನ್ನು ಪರಿಶೀಲಿಸಲು ಸಮಯ ನೀಡಲಾಯಿತು . ಮದ್ಯಾಹ್ನದ ಅವಧಿಯಲ್ಲಿ ಹೆಡ್ ರ್ ಮತ್ತು ಫೂ ಟರ್ ನ್ನು ಒಂದು ಫೈಲ್ ಗೆ ಸೇರಿಸು ವುದು ಅದರಲ್ಲಿ ವಿವಿಧ ಫೀಲ್ಡ್ ಗಳನ್ನು ಹಾಕು ವುದು ಮತ್ತು ಟೇಬಲ್ ಆಫ್ ಕಂಟೆಟ್ ನ್ನು ಅಳವಡಿಸು ವುದರ ಬಗ್ಗೆ ತಿಳಿಸಿ, ಈ ಎಲ್ಲಾ ವಿಷಯಗಳ ಮೇಲೆ ಕೆಲಸವನ್ನು ಮಾಡಲು ತಿಳಿಸಲಾಯಿತು.

ನಾಲ್ಕನೇ ದಿನದ ತರಬೇತಿಯಲ್ಲಿ ಇಂಟರ್ ನೆಟ್ ನಿಂದ ಒಂದು ಚಿತ್ರವನ್ನು ಹೇಗೆ ಸೇವ್ ಮಾಡುವುದು , ಹಾಗೂ ವೆಬ್ ಲಿಂಕ್ ನ್ನು ಹೇಗೆ ನೀಡುವುದು ಎಂಬು ದನ್ನು ತಿಳಿಸಲಾಯಿತು . ನಂತರ ಒಂದು ಅದ್ಯಾಯದ ವಿಷಯವನ್ನು ಹೇಗೆ ಚಟು ವಟಿಕೆಯಾಧಾರಿತವಾಗಿ ವಿವರಿಸಬಹು ದು ಅದರ ಉದ್ದೇಶ , ಬಳಸಬಹು ದಾದ ಸಂಪನ್ಮೂ ಲ, ಬಹು ಮಾಧ್ಯಮ ಸಂಪನ್ಮೂ ಲ, ಬೆಳವಣಿಗೆ ವಿಧಾನ, ಈ ಹಂತದಲ್ಲಿ ಕೇಳಬಹು ದಾದ ಪ್ರಶ್ನೆಗಳು ,ಈ ಎಲ್ಲಾ ವಿಷಯಗಳನ್ನು ಅಲ್ಲಿಯೇ ಚರ್ಚಿಸಿ, ಒಂದು ಸಂಪನ್ಮೂ ಲವನ್ನು ಸಿದ್ದಪಡಿಸಲಾಯಿತು . ನಂತರ ಇದೇ ರೀತಿ ಯಾಗಿ ತಮ್ಮ ತಮ್ಮ ಗುಂಪಿನಲ್ಲಿ ಸಂಪನ್ಮೂ ಲಗಳನ್ನು ರಚಿಸಲು ಸಮಯಾವಕಾಶವನ್ನು ನೀಡಿ, ದಿನದ ಕೊನೆಯಲ್ಲಿ ಇದನ್ನು ಎಲ್ಲರ ಸಮ್ಮುಖ ದಲ್ಲಿ ಪ್ರದರ್ಶಿಸಲು ಅವಕಾಶ ನೀಡಲಾಯಿತು , ಮತ್ತು ವಿಮರ್ಶಿಸಲಾಯಿತು .

ಐದನೇ ಹಾಗೂ ಕೊನೆಯ ದಿನದ ತರಬೇತಿಯಲ್ಲಿ ಶಿಕ್ಷಕರು ತಾವು ರಚಿಸಿದ ಸಂಪನ್ಮೂ ಲಗಳನ್ನು ಹೇಗೆ KOER ಗೆ ಕಳು ಹಿಸು ವುದು ಎಂಬುದನ್ನು ತಿಳಿಸಲಾಯಿತು . ನಂತರ ಒಂದು ಫೊಟೊ ವನ್ನು ಹೇಗೆ ಎಡಿಟ್ ಮಾಡುವುದು ಎಂಬು ವುದನ್ನು ತಿಳಿಸಿ, ಇದನ್ನು ಅಭ್ಯಾಸ ಮಾಡಲು ಅವಕಾಶ ನೀಡಲಾಯಿತು .. ಮದ್ಯಾಹ್ನ ದ ಅವಧಿಯಲ್ಲಿ ಒಂದು ವಿಡಿಯೋ ಕ್ಲಿಪ್ ನ್ನು ಹೇಗೆ ಎಡಿಟ್ ಮಾಡು ವುದು ಎನ್ನು ವುದನ್ನು ತಿಳಿಸಿ, ಇದನ್ನೂ ಪ್ರಾಯೋಗಿಕವಾಗಿ ಅಭ್ಯಾಸ ಮಾಡಲು ಸಮಯ ನೀಡಲಾಯಿತು .

ಕೊನೆಯದಾಗಿ ತರಬೇತಿಯ ಬಗ್ಗೆ ಹಿಮ್ಮಾಹಿತಿ ಪಡೆದು , ಈ ತರಬೇತಿಯಿಂದ ಅರಿತು ಕೊಂಡ ವಿಷಯವನ್ನು ಮುಂದಿನ ದಿನಗಳಲ್ಲಿ ಕಾರ್ಯ ರೂ ಪಕ್ಕೆ ತಂದು KOER ನ್ನು ಇನ್ನಷ್ಟು ಸಂಪದ್ಭರಿತಗೊಳಿಸಲು ತರಬೇತಿಯ ನೋಡಲ್ ಅಧಿಕಾರಿಯಾಗಿರು ವ ಶ್ರೀಮತಿ ಲಕ್ಷ್ಮೀ ರವರು ಮನವಿ ಮಾಡಿ, ತರಬೇತಿಯನ್ನು ಸಮಾಪ್ತಿಗೊಳಿಸಲಾಯಿತು . November 23, 2013