ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ ಜೋಗಪಾಳ್ಯ ಬೆಂಗಳೂರು

From Karnataka Open Educational Resources
Jump to navigation Jump to search

ಈ ಶಾಲೆಯ ವತಿಯಿಂದ ಮುಖ್ಯ ಶಿಕ್ಷಕರು ಆಯ್ಕೆ ಮಾಡಿಕೊಂಡಿದ್ದ ಪ್ರಕಲ್ಪದ ವಿಷಯ ' ಕಂಪ್ಯೂಟರ್‌ ಲ್ಯಾಬ್‌ನ ಅನುಷ್ಠಾನ'. ಇಲ್ಲಿನ ಉತ್ತಮ ಶಾಲಾ ಪರಿಸರವಿದ್ದು ಲ್ಯಾಬ್‌ ಅನುಷ್ಠಾನಕ್ಕೆ ಕೊಠಡಿಯ ಸಮಸ್ಯೆ ಮತ್ತು ಕಂಪ್ಯೂಟರ್‌ ಉಪಕರಣಗಳು ಇರಲ್ಲಿಲ್ಲ. ಈ ವಿಚಾರವನ್ನು ಶಾಲಾ ಶಿಕ್ಷಕರ ಜೊತೆ ಚರ್ಚಿಸಿ ಒಂದು ಯೋಜನೆಯನ್ನು ಮುಖ್ಯಶಿಕ್ಷಕರು ರೂಪಿಸಿಕೊಂಡರು. ಟೆಕ್‌ ಮಹಿಂದ್ರ ಕಂಪನಿಯವರಿಂದ ಸುಮಾರು ಹನ್ನೆರಡು ಕಂಪ್ಯೂಟರ್‌ಗಳನ್ನು ವ್ಯವಸ್ಥೆಮಾಡಿಕೊಳ್ಳಲಾಯಿತು. ನಂತರ ಶಾಲೆಯ ಒಂದು ಕೊಠಡಿಯನ್ನು ಆಯ್ಕೆಮಾಡಿಕೊಂಡು ದಾನಿಗಳ ಸಹಾಯದಿಂದ ವಿದ್ಯುತ್‌ ಸಂಪರ್ಕ ಮತ್ತು ಇತರೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲಾಯಿತು. ಈಗ ಕಂಪ್ಯೂಟರ್‌ ಲ್ಯಾಬ್‌ ಬಳಕೆಗೆ ತಯಾರಿದೆ. ಈಗ ಶೈಕ್ಷಣಿಕ ವರ್ಷದ ಕೊನೆಯಾಗಿರುವುದರಿಂದ ವಾರಾಂತ್ಯದಲ್ಲಿ ಅಂದರೆ ಶನಿವಾರದಂದು ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಅವಕಾಶ ನೀಡಲಾಗಿದ್ದು ತರಬೇತಿ ನೀಡಲು ಸಾಮಾಜಿಕ ಕಾರ್ಯಕರ್ತರೊಬ್ಬರು ಸಹಾಯಮಾಡುತ್ತಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ವೇಳಾಪಟ್ಟಿಯನ್ನು ರೂಪಿಸಿಕೊಂಡು ತಂತ್ರಜ್ಞಾನಾಧಾರಿತ ತರಗತಿಯನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ.

ಈ ಯೋಜನೆ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿ ಪ್ರಕಲ್ಪ ಪ್ರಸ್ತುತಿಯ ಸಂಪನ್ಮೂಲವನ್ನು ಈ ಕೆಳಗೆ ನೀಡಲಾಗಿದ್ದು ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳಲು ಕೆಳಗಿನ ಪ್ರಸ್ತುತಿಯ ಜಾರುಕಗಳು ಮತ್ತು ವೀಡಿಯೋವನ್ನು ಗಮನಿಸಬಹುದಾಗಿದೆ.
View the slide here and download it from here.

School leadership program for BBMP HMs 2017 - ಮುಖ್ಯಪುಟಕ್ಕೆ ಹಿಂದಿರುಗಲು ಇಲ್ಲಿ ಕ್ಲಿಕ್ಕಿಸಿ