ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ ಪಂಚಶೀಲನಗರ ಬೆಂಗಳೂರು

From Karnataka Open Educational Resources
Revision as of 08:47, 23 February 2018 by Anand (talk | contribs) (Created page with "ಈ ಶಾಲೆಯ ವತಿಯಿಂದ ಮುಖ್ಯ ಶಿಕ್ಷಕರು ಆಯ್ಕೆ ಮಾಡಿಕೊಂಡಿದ್ದ ಪ್ರಕಲ್ಪದ ವಿಷಯ '...")
(diff) ← Older revision | Latest revision (diff) | Newer revision → (diff)
Jump to navigation Jump to search

ಈ ಶಾಲೆಯ ವತಿಯಿಂದ ಮುಖ್ಯ ಶಿಕ್ಷಕರು ಆಯ್ಕೆ ಮಾಡಿಕೊಂಡಿದ್ದ ಪ್ರಕಲ್ಪದ ವಿಷಯ ' ಸುಸಜ್ಜಿತ ಗ್ರಂಥಾಲಯ'. ಶಾಲೆಯಲ್ಲಿ ಲಭ್ಯವಿರುವ ಎಲ್ಲಿ ಎಲ್ಲಿಯೋ ಹರಡಿಹೋಗಿದ್ದ ಪುಸ್ತಕಗಳನ್ನು ಒಟ್ಟಾಗಿಸಿ ಲಘು ಶಾಲಾ ಗ್ರಂಥಾಲಯವನ್ನು ರೂಪಿಸುವುದಾಗಿದೆ. ಆದರೆ ಇಲ್ಲಿನ ಮುಖ್ಯ ಸವಾಲು ಕೊಠಡಿಯದು. ಸುಸಜ್ಜತ ಗ್ರಂಥಾಲಯಕ್ಕಾಗಿ ಮುಖ್ಯ ಶಿಕ್ಷಕರ ಕೊಠಡಿಯನ್ನೆ ಅರ್ಧ ಭಾಗಮಾಡಿ ಉತ್ತಮ ಶಾಲಾ ಗ್ರಂಥಾಲಯವನ್ನು ರೂಪಿಸಿಕೊಂಡಿರುವುದೇ ಆಗಿದೆ. ಮೊದಲು ಶಿಕ್ಷಕರ ಜೊತೆ ಚರ್ಚಿಸಿ ಶಾಲೆಯಲ್ಲಿನ ಪುಸ್ತಕ ಸಂಪನ್ಮೂಲವನ್ನು ಸಂಗ್ರಹಿಸಿಕೊಳ್ಳಲಾಯಿತು. ನಂತರ ಅದಕ್ಕೆ ಅಗತ್ಯವಿರುವ ಪುಸ್ತಕ ಖಾನೆಗಳನ್ನು ಜೋಡಿಸಿಕೊಳ್ಳಲಾಯಿತು. ಇದನ್ನು ಇರಿಸಲು ಮುಖ್ಯಶಿಕ್ಷಕರ ಕೊಠಡಿಯನ್ನೆ ಬಳಸಿಕೊಳ್ಳಲಾಯಿತು. ನಂತರ ಶಾಲಾ ಮಹಡಿಯ ತುದಿಗಳಲ್ಲೂ ಸಹ ಖಾನೆಗಳನ್ನು ಇರಿಸಿ ಅಲ್ಲೂ ಸಹ ಮಕ್ಕಳಿಗೆ ಅನುಕೂಲವಾಗುವ ಕೆಲವು ಪುಸ್ತಕಗಳನ್ನು ಇಡಲಾಗಿತ್ತು.

ಪ್ರಸ್ತುತ ಮಕ್ಕಳಿಗೆ ಪ್ರತಿವಾರವು ಸಹ ಪುನರಾವರ್ತನೆಯಾಗುವಂತೆ ಒಂದು ದಾಖಲೆ ಪುಸ್ತಕದಲ್ಲಿ ಸರಳ ವಾಕ್ಯಗಳಿರುವ,ಚಿತ್ರಗಳಿರುವ, ಪುಟ್ಟ ಪುಟ್ಟ ಪುಸ್ತಕಗಳನ್ನು ನೀಡಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಓದುವ ಹವ್ಯಾಸ ಸಹ ಹೆಚ್ಚಾಗಿದೆ.


View the slide here and download it from here.