STF 2014-15 Dakshina Kannada
19 districts
ಕನ್ನಡ
Batch 1
Agenda
If district has prepared new agenda then it can be shared here
See us at the Workshop
File:WP_004219e.jpgFile:Example.jpg 01/12/2014 to 05/12/2014
Workshop short report
to 05/12/2014
1st Day. 01/12/2014
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಶಿಕ್ಷಕರ ತರಬೇತಿ ಮಧ್ಯವರ್ತನೆಯಡಿಯಲ್ಲಿ ಎಸ್.ಟಿ.ಎಫ್-ಗಣಿತ ಶಿಕ್ಷಕರ ತರಬೇತಿ ಕಾರ್ಯಕ್ರಮವು ದಿನಾಂಕ 01-12-2014ರಂದು ಸಿ.ಟಿ.ಇ. ಮಂಗಳೂರು ಇಲ್ಲಿಯ ಸುಸಜ್ಜಿತ ಗಣಕ ಯಂತ್ರ ಕೊಠಡಿಯಲ್ಲಿ ಪ್ರಾರಂಭಗೊಂಡಿತು. ಐದು ದಿನಗಳ ತರಬೇತಿಯಲ್ಲಿ ಕಲಿಕಾಂಶಗಳನ್ನು ಗರಿಷ್ಠ ಮಟ್ಟದಲ್ಲಿ ಶಿಬಿರಾರ್ಥಿಗಳಿಗೆ ತಲುಪಿಸುವ ಉದ್ದೇಶದಿಂದ ಉದ್ಘಾಟನಾ ಸಮಾರಂಭಕ್ಕೆ ಸಮಯವನ್ನು ವ್ಯರ್ಥಮಾಡದೇ ತರಬೇತಿ ಕಾರ್ಯಕ್ರಮವು ಪೂರ್ವಾಹ್ನ 10.00 ಗಂಟೆಗೆ ಪ್ರಾರಂಭಗೊಂಡಿತು. ಪ್ರಥಮ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳ ಹಾಗೂ ಶಿಬಿರಾರ್ಥಿಗಳ ಪರಿಚಯ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಯಾದ ಶ್ರೀ ಸುಬ್ರಹ್ಮಣ್ಯ ಭಟ್ ಕೆ.ಜಿ. ನಡೆಸಿಕೊಡುತ್ತಾ ಎಲ್ಲರನ್ನೂ ಸ್ವಾಗತಿಸಿದರು. ತರಬೇತಿಯ ನೋಡಲ್ ಅಧಿಕಾರಿಯವರಾದ ಡಯಟ್ ಮಂಗಳೂರು ಇಲ್ಲಿಯ ಹಿರಿಯ ಉಪನ್ಯಾಸಕರಾದ ಶ್ರೀ ಆಂಡ್ರ್ಯೂ ಕುಟಿನ್ಹೋ ಇವರು ತರಬೇತಿಯ ಉದ್ಧೇಶಗಳ ಬಗ್ಗೆ ತಿಳಿಸುತ್ತಾ ಶಿಕ್ಷಕರು ಗಣಿತ ಬೋಧನಾ ಕಲಿಕಾ ಚಟುವಟಿಕೆಗಳಲ್ಲಿ ಶಾಲೆಗಳಲ್ಲಿರುವ ಗಣಕಯಂತ್ರಗಳನ್ನು ಬಳಸಿಕೊಂಡು ಬೋಧನೆ ನಡೆಸಿದಾಗ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡುತ್ತದೆ ಎಂದರು. ಸಿ.ಟಿ.ಇ. ಹಿರಿಯ ಉಪನ್ಯಾಸಕರಾದ ಡಾ/ ಕುಮಾರಸ್ವಾಮಿ ಎಚ್. ಇವರು ಶಿಕ್ಷಣ ಇಲಾಖೆಯಲ್ಲಿ ಮಾಹಿತಿ ವಿನಿಮಯಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಬೆಳವಣಿಗೆಗಳನ್ನು ತಿಳಿಸುವುದರೊಂದಿಗೆ ತರಬೇತಿ ಕೇಂದ್ರದ ಬಗ್ಗೆ ಮಾಹಿತಿಗಳನ್ನು ನೀಡುತ್ತಾ ತರಬೇತಿಗೆ ಶುಭ ಹಾರೈಸಿದರು. ಡಯೆಟ್ ಕಿರಿಯ ಉಪನ್ಯಾಸಕರಾದ ಶ್ರೀಮತಿ ವೀಣಾ ಇವರು ಉಪಸ್ಥಿತರಿದ್ದು ತರಬೇತಿಯ ಪ್ರಾರಂಭಿಕ ಚಟುವಟಿಕೆಗಳಿಗೆ ಸಹಕರಿಸಿದರು.
ಬೆಳಗ್ಗಿನ ಉಪಹಾರದ ತರುವಾಯ ಸಂಪನ್ಮೂಲ ವ್ಯಕ್ತಿಯಾದ ಶ್ರೀ ತಾರಾನಾಥ ಆಚಾರ್ ಇವರು ಒಬುಂಟು, ಎಡುಬುಂಟು, ಲೈನಕ್ಸ್ ಮತ್ತು ಮೈಕ್ರೋಸಾಫ್ಟ್ ಆಫೀಸ್‍ಗಳ ಬಗ್ಗೆ ಮಾಹಿತಿ ನೀಡಿದರು. ಉಚಿತ ಸಾಫ್ಟ್‍ವೇರ್ ಒಬುಂಟು ಇದರ ಪ್ರಯೋಜನಗಳ ಬಗ್ಗೆ ಪ್ರಾರಂಭಿಕ ಮಾಹಿತಿಗಳನ್ನು ನೀಡುತ್ತಾ ಮೈಕ್ರೋಸಾಫ್ಟ್ ಆಫೀಸ್‍ಗೂ ಇದಕ್ಕೂ ಇರುವ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ತಿಳಿಸಿದರು. ಶಾಲೆಗಳಲ್ಲಿ ಎಡುಬುಂಟು ಸಾಫ್ಟ್‍ವೇರ್ ಬಳಸುವಂತೆ ತಿಳಿಸಿದರು. ಗಣಕಯಂತ್ರದಲ್ಲಿ ಒಬುಂಟು ಸಾಫ್ಟ್‍ವೇರ್ ಅನುಸ್ಥಾಪಿಸುವ ಕ್ರಮ, ಫೋಲ್ಡರ್‍ಗಳನ್ನು ರಚಿಸುವಿಕೆ, ಟೆಕ್ಸ್ಟ್ ಡಾಕ್ಯುಮೆಂಟ್‍ನಲ್ಲಿ ಕನ್ನಡ ಲಿಪಿ ತಂತ್ರಾಂಶವನ್ನು ಬಳಸುವ ವಿಧಾನ, ಸೂತ್ರಗಳನ್ನು ಬರೆಯುವ ವಿಧಾನವನ್ನು ಪ್ರಾಯೋಗಿಕವಾಗಿ ತೋರಿಸಿದರು. ಎಲ್ಲಾ ಶಿಬಿರಾರ್ಥಿಗಳು ಈ ಚಟುವಟಿಕೆಗಳನ್ನು ಮಾಡಲು ಪ್ರಯತ್ನಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ವೀಣಾ ಮಲ್ಯ, ಶ್ರೀ ಗಣೇಶ ಪಟಗಾರ, ಶ್ರೀ ಪರಮೇಶ್ವರ ಹಗಡೆ ಇವರು ಶಿಬಿರಾರ್ಥಿಗಳಿಗೆ ಎದುರಾದ ಸಮಸ್ಯೆಗಳನ್ನು ಪರಿಹರಿಸಲು ಸಹಕರಿಸಿದರು. ಮಧ್ಯಾಹ್ನದ ಊಟದ ನಂತರ ಇಂಟರ್‍ನೆಟ್ ಬಳಕೆ, ಇ-ಮೇಲ್ ಐಡಿ ರಚಿಸುವಿಕೆ, ಇ-ಮೇಲ್ ಕಳುಹಿಸುವಿಕೆಯ ವಿಧಾನಗಳು, ಬಂದಿರುವ ಇ-ಮೇಲ್‍ಗಳನ್ನು ಓದುವಿಕೆಯ ವಿಧಾನ ಇವುಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಕಂಪ್ಯೂಟರ್ ಪ್ರಾತ್ಯಕ್ಷಿಕೆಯ ಮೂಲಕ ಶಿಬಿರಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು. ಎಲ್ಲಾ ಶಿಬಿರಾರ್ಥಿಗಳು ಇ-ಮೇಲ್ ಐಡಿ ರಚಿಸಿ ಸಂಪನ್ಮೂಲ ವ್ಯಕ್ತಿಗಳಿಗೆ ನೀಡಿದರು. ಎಂ.ಎಸ್.ಟಿ.ಎಫ್. ಮಂಗಳೂರು ಇಲ್ಲಿ ಸದಸ್ಯರಾಗಿ ಎಲ್ಲಾ ಶಿಬಿರಾರ್ಥಿಗಳನ್ನು ಸೇರಿಸಲಾಯಿತು. ತದನಂತರ ಇ-ಮೇಲ್ ಕಳುಹಿಸುವಿಕೆಯ ವಿಧಾನದ ಚಟುವಟಿಕೆಯನ್ನು ಮಾಡಿಸಲಾಯಿತು. ಅಪರಾಹ್ನದ ಚಹಾ ವಿರಾಮದ ನಂತರ ಇ-ಮೇಲ್ ಐಡಿ, ಇಮೇಲ್ ಕಳುಹಿಸುವಿಕೆ ಮತ್ತು ಸ್ವೀಕೃತಿಗೆ ಸಂಬಂಧಿಸಿದಂತೆ ಪಾಸ್ ವರ್ಡ್ ಬದಲಾವಣೆ, ಸಿಗ್ನೇಚರ್ ಮತ್ತು ಛಾಯಾಚಿತ್ರಗಳ ಅಳವಡಿಸುವಿಕೆಯ ಬಗ್ಗೆ ಮಾಹಿತಿಯನ್ನು ಶ್ರೀ ಪರಮೇಶ್ವರ ಹೆಗಡೆ ಇವರು ಮಾಹಿತಿ ನೀಡಿದರು. ಎಲ್ಲಾ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಂತೆ ಶಿಬಿರಾರ್ಥಿಗಳು ಚಟುವಟಿಕೆಗಳನ್ನು ಮಾಡಿದರು. ಎಲ್ಲಾ ಶಿಬಿರಾರ್ಥಿಗಳು ಬೋಧನಾ ಕಲಿಕಾ ಚಟುವಟಿಕೆಗೆ ಪೂರಕವಾಗಿ ಗಣಕ ಯಂತ್ರ ಬಳಕೆಯ ಪ್ರಾರಂಭಿಕ ಮಾಹಿತಿಗಳ ಬಗ್ಗೆ ತಿಳಿಯುವುದರೊಂದಿಗೆ ಪ್ರಥಮ ದಿನದ ತರಬೇತಿ ಕಾರ್ಯಕ್ರಮ ಮುಕ್ತಾಯಗೊಂಡಿತು.
2nd Day. 02/12/2014
ದಿನಾಂಕ 02-12-2014 ರಂದು 2ನೇ ದಿನದ ತರಬೇತಿ ಕಾರ್ಯಕ್ರಮವು ಉಪಹಾರದ ನಂತರ ಪ್ರಾರಂಭವಾಯಿತು. ಉಮಾದೇವಿಯವರು ಪ್ರಾರ್ಥನೆ ಹಾಡುವುದರೊಂದಿಗೆ ಕಾರ್ಯಕ್ರಮಕ್ಕೆಚಾಲನೆ ನೀಡಿದರು. ಪರಮೇಶ್ವರ ಹೆಗಡೆಯವರು ಚಿಂತನ ಕಾರ್ಯಕ್ರಮ ನಡೆಸಿದರು. ಹರಿಕಿರಣ್ ಕೆ ಇವರು ವರದಿ ಮಂಡಿಸಿದರು. ನಂತರ ತರಬೆತುದಾರರಾದ ವೀಣಾ ಮಲ್ಯರವರು ಏಔಇಖ ಬಗ್ಗೆ ಮಾಹಿತಿ ನೀಡಿದರು. ಎಲ್ಲಾ ಶಿಕ್ಷಕರು ಏಔಇಖ oಠಿeಟಿ ಮಾಡಿ ಮಾಹಿತಿ ತಿಳಿದು ಕೊಂಡರು. ನಂತರ 5 ನಿಮಿಷದ ವಿರಾಮ ನೀಡಲಾಯಿತು. ವಿರಾಮದ ನಂತರ ತರಬೇತಿ ಕಾರ್ಯಕ್ರಮ ಮುಂದುವರಿಯಿತು. ವೀಣಾ ಮಲ್ಯರವರು ಈಡಿee miಟಿಜ ಬಗ್ಗೆ ಮಾಹಿತಿ ನೀಡಿದರು ಮತ್ತು ಅದರಲ್ಲಿ ಒಂದು ವಿಷಯದ ಈಟoತಿ ಛಿhಚಿಡಿಣ ಮಾಡು ವುದನ್ನು ತಿಳಿಸಿದರು . ಎಲ್ಲಾ ಶಿಕ್ಷಕರು ಒಂದು ವಿಷಯದ ಈಟoತಿ ಛಿhಚಿಡಿಣಮಾಡಿರು. ನಂತರ ಊಟದ ವಿರಾಮ ನೀಡಲಾಯಿತು. ಊಟದ ವಿರಾಮದ ತರಬೇತಿ ಕಾರ್ಯಕ್ರಮ ಮುಂದು ವರಿಯಿತು. ವೀಣಾ ಮಲ್ಯರವರು Pheಣ ಬಗ್ಗೆ ಮಾಹಿತಿ ನೀಡಿದರು. ಎಲ್ಲಾ ಶಿಕ್ಷಕರು Pheಣ ನಲ್ಲಿರುವ ಂಟಿimಚಿಣioಟಿ ಗಳನ್ನು ನೋಡಿದರು. ನಂತರ Peಡಿioಜiಛಿ ಣಚಿbಟe ಬಗ್ಗೆ ಮಾಹಿತಿ ನೀಡಿದರು. ನಂತರ 5 ನಿಮಿಷದ ಚಹಾ ವಿರಾಮ ನೀಡಲಾಯಿತು. ವಿರಾಮದ ನಂತರ ತರಬೇತಿ ಕಾರ್ಯಕ್ರಮ ಮುಂದು ವರಿಯಿತು. ಕೆಲವು ಶಿಕ್ಷಕರನ್ನು ಒSಖಿಈ ಮತ್ತು Sಖಿಈ gಡಿouಠಿ ಗಳಿಗೆ ಸೇರಿಸಲಾಯಿತು. ನಂತರ ಪರಮೇಶ್ವರ ಹೆಗಡೆಯವರು Iಟಿಣeಡಿಟಿeಣ ಬಗ್ಗೆ ಮಾಹಿತಿ ನೀಡಿದರು. Iಟಿಣeಡಿಟಿeಣ ನಿಂದ ಫೋಟೋಗಳನ್ನು ಜoತಿಟಿಟoಚಿಜ ಮಾಡುವ ಬಗ್ಗೆ ಮಾಹಿತಿ ನೀಡಿದರು. ಎಲ್ಲಾ ಶಿಕ್ಷಕರು ಕೆಲವು ಫೋಟೋ ಗಳನ್ನುಜoತಿಟಿಟoಚಿಜ ಮಾಡಿ ತಮ್ಮ ಜಿoಟಜeಡಿ ಗಳಿಗೆ ಹಾಕಿಕೊಂಡರು. ಇಲ್ಲಿಗೆ 2ನೇ ದಿನದ ತರಬೇತಿ ಕಾರ್ಯಕ್ರಮ ಮುಗಿಯಿತು.
3rd Day. 03/12/2014
2014:15 ನೇ ಸಾಲಿನ ಗಣಿತ STF ತರಬೇತಿಯು ಡಯಟ್ ಮಂಗಳೂ ರು ಇದರ ಆಶ್ರಯದಲ್ಲಿ ಸಿಟಿಇ ಮಂಗಳೂ ರಿನಲ್ಲಿ 3ನೇ ದಿನದ ತರಬೇತಿಯು ದಿನಾಂಕ 03/12/2014 ರಂದು ಬೆಳಗ್ಗಿನ ಉಪಾಹಾರದ ನಂತರ ಶಿಕ್ಷಕರಾದ ಶ್ರೀ ಸು ನಿಲ್ ಇವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.. 2ನೇ ದಿನದ ವರದಿಯನ್ನು ಶಿಕ್ಷಕರಾದ ಶ್ರೀರಾಮಚಂದ್ರ ದೇವಾಡಿಗ ವಾಚಿಸಿದರು. ಚಿಂತನವನ್ನು ಶ್ರೀ ಇನಾಸ್ ಗೊನ್ಸಾಲ್ವಿಸ್ ಮಾಡಿದರು.ತದನಂತರ ವೊದಲ ಅವಧಿಯನ್ನು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ತಾರಾನಾಥ Geogebra ದಲ್ಲಿ ರೇಖಾಗಣಿತದಲ್ಲಿ ಬರು ವ ವಿವಿಧ ಆಕೃತಿಗಳನ್ನು ರಚಿಸು ವ ಕ್ರಮವನ್ನು ಸಮರ್ಪಕವಾಗಿ ವಿವರಿಸಿದರು..ಆನಂತರ ತಮ್ಮ ಕಂಪ್ಯೂ ಟರ್ ಗಳಲ್ಲಿ ರಚಿಸಲಾಯಿತು.. ರೇಖಾಖಂಡ, ಕೋನ, ಆವುಗಳ ಆಳತೆ ಕಂಡು ಹಿಡಿಯು ವುದು ,ತ್ರಿಭು ಜ,ವೃತ್ತ,ಸ್ಪರ್ಶಕಗಳ ರಚಿಸು ವುದನ್ನು ಶಿಬಿರಾರ್ಥಿಗಳು ರಚಿಸಿದರು.ಸಂಪನ್ಮೂ ಲ ವ್ಯಕ್ತಿಗಳಾಗಿ ಶ್ರೀಮತಿ ವೀಣಾ, ಶ್ರೀ ಗಣೇಶ್ ಪಟಗಾರ್ ,ಶ್ರೀ ಕೆ.ಜಿ. ಸು ಬ್ರಹ್ಮಣ್ಯ ಭಟ್ ಇವರು ಭಾಗವಹಿಸಿದ್ದರು . ಊಟದ ವಿರಾಮದ ನಂತರ ಸಮರೂಪ ತ್ರಿಭುಜಗಳ,ವೃತ್ತ,ಸ್ಪರ್ಶಕಗಳ ರಚಿಸು ವುದನ್ನು ಕಲಿಸಲಾಯಿತು. ನಂತರ Geogebra ಸ್ಲೈಡರ ಬಳಸಿ ಸೂತ್ರ ರಚಿಸುವ ಬಗೆಯನ್ನು ಕಲಿಸಲಾಯಿತು.
4th Day. 04/12/2014
ಉದರವನ್ನು ತಂಪಾಗಿಸಿದ ಬೆಳಗಿನ ಉಪಹಾರದ ಬಳಿಕ ಶ್ರೀಮತಿ ಉಮಾರವರ ಪಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಶು ಭ ಚಾಲನೆ ಯನ್ನಿತ್ತರು . ಶ್ರೀಮತಿ ಸುರೇಖಾರವರು 3ನೇ ದಿನದ ಸಂಕ್ಷಿಪ್ತ ವರದಿಯನ್ನು ವಾಚಿಸಿದರು. ಚುರುಕಿನ ವ್ಯಕ್ತಿತ್ವದ , ಕಂಪ್ಯೂಟರ್ ಬಳಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಗಣಿತದ ಬೋಧನೆಗೆ ಪೂರಕವೆನಿಸಿದ ವಿಷಯಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ತಾರಾನಾಥ ಆಚಾರ್ ರವರು ತಮ್ಮಲ್ಲಿರುವ ಜ್ಞಾನವನ್ನು ಸಮರ್ಥವಾಗಿ ಹಂಚಿಕೊಂಡರು. ಮೊದಲಿಗೆ ಹಿಂದಿನ ದಿನದ ಕಲಿತ ವಿಷಯಗಳನ್ನು ಮನನ ಮಾಡಲಾಯಿತು.ಜಿಯೋಜೀಬ್ರಾದಲ್ಲಿ ಗಣಿತದ ಸೂತ್ರಗಳನ್ನು ರಚಿಸುವ ವಿಧಾನವನ್ನು ನೆನಪಿ ಸಲಾಯಿತು. ಸ್ಲ್ಯೆ ಡರ್ ಉಪಯೋಗಿಸಿ ವ್ಋತ್ತದ ಪರಿಧಿ ಹಾಗೂ ವಿಸ್ತೀರ್ಣ ಕಂಡುಹಿಡಿಯುವ ವಿಧಾನ , ಕಂಸ ಉಪಯೋಗಿಸಿ ರೇಖೆಯ ಲಂಬಾರ್ಧಕ ರೇಖೆ ಎಳೆಯುವ ಕ್ರಮ , ಆಕ್ರತಿಗಳ ರಿಫ್ಲಕ್ಷನ್ ಡಯಲೇಶನ್ ಮಾಡುವ ರೀತಿ , ಸಮಾಂತರ ಮಾಧ್ಯ, ಗುಣೋತ್ತರ ಮಾಧ್ಯ, ಹರಾತ್ಮಕ ಮಾಧ್ಯ ಗಳ ಸೂತ್ರಗಳನ್ನು ರಚಿಸಿ ಸಮಸ್ಯೆಗಳನ್ನು -ಹಂತಗಳನ್ನು ಉಪಯೋಗಿಸಿ ಮಾಡುವ ವಿಧಾನ ,ಚತುರ್ಭುಜ ರಚಿಸಿ ವಿಸ್ತೀರ್ಣದ ಲೆಕ್ಕಾಚಾರ , ಗ್ರಾಫ್ ಬಳಸಿ ಪರವಲಯ ದ ರಚನೆಯೊಂದಿಗೆ ವರ್ಗ ಸಮೀಕರಣ ಬಿಡಿಸುವ ಕ್ರಮ , ಹೊಂದಾಣಿಕೆ ಇಲ್ಲದ ಗಣಗಳಲ್ಲಿ ಸೂತ್ರ ರಚಿಸಿ ಸಮಸ್ಯೆ ಸಮಸ್ಯೆಯ ಪರಿಹಾರ , ಮ.ಸಾ.ಅ. ಲ.ಸಾ.ಅ. ,ಕ್ರಮಯೋಜನೆ, ವಿಕಲ್ಪಗಳ ಸಮಸ್ಯೆಗಳನ್ನು ಬಿಡಿಸುವ ಹಂತಗಳನ್ನು ರಚಿಸುವ ವಿಧಾನ ವನ್ನು ತಿಳಿಯಪಡಿಸಿದರು. ಶಿಬಿರಾರ್ಥಿಗಳೆಲ್ಲರೂ ಸಕ್ರಿಯವಾಗಿ ಭಾಗವಹಿಸಿ ತಮಗಿದ್ಧ ಸಂಶಯಗಳನ್ನು ಪರಿಹರಿಸಿದರು. ಅನೇಕ ಚಟುವಟಿಕೆಗಳನ್ನು ತಾವೇ ಸ್ವತಃ ಮಾಡಿ ಆನಂದಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸುಬ್ರಹ್ಮಣ್ಯ ಭಟ್ , ಶ್ರೀ ಗಣೇಶ ಪಟಗಾರ್ ,ಶ್ರೀಮತಿ ವೀಣಾ ಮಯ್ಯ ರವರು ಶಿಬಿರಾರ್ಥಿಗಳಿಗೆ ಕಂಪ್ಯೂಟರ್ ಕಲಿಕೆಗೆ ಮಾರ್ಗದರ್ಶನ ಮಾಡಿದರು. ಅಪರಾಹ್ನ ಭೋಜನದ ಬಳಿಕ ಪುನಃ ಶಿಕ್ಷಕರೆಲ್ಲಾ ಬೆಳಗ್ಗಿನ ಚಟುವಟಿಕೆಗಳ ಮುಂದುವರಿಸುವಲ್ಲಿ ಮಗ್ನರಾದರು. ಬಳಿಕ ಡಯಟ್ ನ ಪ್ರಾಂಶುಪಾಲರಾದ ಶ್ರೀ ಸಿಪ್ರಿಯನ್ ಮೊಂತೆರೋ ರವರು ಆಗಮಿಸಿ ಮಾರ್ಗಸರ್ಶನ ಮಾಡಿದರು. ಪ್ರೌಢಶಾಲಾ ಶಿಕ್ಷಣದಲ್ಲಿ ಶಿಕ್ಷಕರ ಪಾತ್ರವನ್ನು ವಿವವರಿಸಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರು ಗಮನ ಹರಿಸಲು ತಿಳಿಸಿದರು. ತರಬೇತಿಗಳಲ್ಲಿ ಪಡೆದ ಜ್ಞಾನವನ್ನು ವಿದ್ಯಾ ರ್ಥಿಗಳಿಗೆ ಗಣಿತದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಸಮರ್ಥರಾಗುವಂತೆ ಕಿವಿಮಾತನ್ನಿತ್ತರು. ಬಳಕ ಮಾತನಾಡಿದ ಡಯಟ್ ನ ಹಿರಿಯ ಉಪನ್ಯಾಸಕಿಯವರಾದ ಶ್ರೀಮತಿ ವೀಣಾರವರು ಐಸಿಟಿ 1, 2,3 ರ ಬಗ್ಗೆ ಮಾಹಿತಿ ನೀಡಿ , ಶುಭ ಹಾರ್ಐಸಿದರು. ಸಂಜೆ ಚಹಾ ವಿರಾಮದ ನಂತರ ಅಡಾಸಿಟಿ ತಮತ್ರಾಂಶಗಳ ಮೂಲಕ ಫೋಟೊಗಳನ್ನು ಅಪಲೋಡ್, ಕ್ರಾಪ್ ಮಾಡಿ ಪಿಚ್ಚರ್ ಎಡಿಟಿಂಗ್ , ವಿಡಿಯೊ ಗೆ ಆಡಿಯೊ ಸೇರ್ಪಡೆ , ವಿಡಿಯೊ ಫ್ಯೆಲ್ ಹಾಡುಗಳಿಗೆ ಇಕೋ ಕೊಡುವ ವಿಧಾನ ,ಶ್ರುತಿ ಬದಲಾಯಿಸುವ ವಿಧಾನಗಳನ್ನು ಶ್ರೀ ತಾರಾನಾಥ ರು ಪ್ರಾಯೋಗಿಕವಾಗಿ ತಿಳಿಸಿದರು. ಇಮ್ಯೆಲ್ ಮೂಲಕ ಲಿಂಕ್ ಕಳುಹಿಸುವ ವಿಧಾನ,ಚಿತ್ರಗಳನ್ನು ಇನ್ ಸರ್ಟ್ ಮಾಡುವುದು , ಫ್ಯೆಲ್ ಅಟಾಚ್ ಮಾಡಿ ಮ್ಯೆಲ್ ಕಾಂಪೂಸ್ ಮಾಡಿ ಕಳುಹಿಸುವ ವಿಧಾನವನ್ನು ವಿವರಿಸಿದರು. ತನ್ನಲ್ಲಿರುವ ಕಂಪ್ಯೂಟರ್ ಜ್ಞಾನದ ರಸಧಾರೆಯನ್ನು ಶಿಬಿರಾರ್ಥಿಗಳಿಗೆ ಧಾರೆ ಎರೆದು ಗಣಿತ ಕಲಿಕೆಯಲ್ಲಿ ಎಡುಬುಂಟು, ಲ್ಯೆ ನೆಕ್ಸ್ ,ಜಿಯೋಜಿಬ್ರಾಗಳ ಬಳಕೆ ಯ ಜಾಗ್ರತಿಯನ್ನು ಮೂಡಿಸುವಲ್ಲಿ ಸಫಲರಾದರು. ಶಿಬಿರಾರ್ಥಿಗಳು ಪ್ರಾಯೋಗಿಕವಾಗಿ ಚಟುವಟಿಕೆಗಳನ್ನು ಮಾಡಿ ಕಂಪ್ಯೂಟರ್ ಜ್ಞಾನವನ್ನು ಹೆಚ್ಚಿಸಿಕೊಡರು. ಕಂಪ್ಯೂಟರ್ ಶಿಕ್ಷಣದ ಶಕ್ತಿ ಮೂಡಿಸಬೇಕಿದೆ ಗಣಿತ ವಿಷಯದಲ್ಲಿ ಆಸಕ್ತಿ.
Batch 2
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Batch 3
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Add more batches, by simply copy pasting Batch 3 information and renaming it as Batch 4
Kannada
Batch 1
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Batch 2
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Batch 3
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Add more batches, by simply copy pasting Batch 3 information and renaming it as Batch 4