ಮಾಡ್ಯೂಲ್‌ ೩ ಹದಿಹರೆಯದ ಪರಿಚಯ ಭಾಗ ೧

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಉದ್ದೇಶ:

ಹದಿಹರೆಯದಲ್ಲಿ ಕಿಶೋರಿಯರಿಗೆ ಬರುವ ಸಮಸ್ಯೆ ಮತ್ತು ಸವಾಲುಗಳ ಬಗ್ಗೆ ಚರ್ಚಿಸುವುದು

ಪ್ರಕ್ರಿಯೆ

ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು.

ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು.  

೧. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ

೨. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ

೩. ಎಲ್ಲಾರೂ ಭಾಗವಹಿಸಬೇಕು

೪. ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ

೫. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ

೬. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು 10 ನಿಮಿಷ

ಇದಾದ ನಂತರ

ಕಿಶೋರಿಯರನ್ನು ೪ ಗುಂಪುಗಳಾಗಿ ಮಾಡಿಕೊಳ್ಳಲು, ೪ ಬೇರೆ ಬೇರೆ ಪಕ್ಷಿಗಳ ಚಿತ್ರಗಳನ್ನ(ಗುಂಪು - 01 ಗುಬ್ಬಿ

ಗುಂಪು - 02 ಕೋಗಿಲೆ ಗುಂಪು - 03 ಪಾರಿವಾಳ  ಗುಂಪು - 04 ಗಿಳಿ) ಬಾಕ್ಸಿನಲ್ಲಿ ಹಾಕಿ ಅವರ ಹತ್ತಿರ ಆರಿಸಿಕೊಂಡು ಅವರು ಅದನ್ನು ಬೇರೆಯವರ ಜೊತೆಗೆ  exchange ಮಾಡಿಕೊಳ್ಳುವ ಹಾಗಿಲ್ಲ ಎಂದು ಹೇಳುವುದು. ಅವರನ್ನು ಅವರಿಗೆ ಬಂದಿರುವ ಆಯಾ ಗುಂಪಿನಲ್ಲಿ ಆಯ್ದ ಜಾಗಗಳಲ್ಲಿ ಕುಳಿತುಕೊಳ್ಳಲು ಹೇಳುವುದು.(Classroom and stage)

ಒಂದೊಂದು ಗುಂಪಿನಲ್ಲೂ ಒಬ್ಬ ಫೆಸಿಲಿಟೆಟರ್‌ ಇರಬೇಕು.   ಪ್ರತಿ ಗುಂಪಿಗೆ ೧ ಚಾರ್ಟ್‌ಶೀಟ್‌ ಮತ್ತು ಸ್ಕೆಚ್‌ ಪೆನ್‌ಗಳನ್ನು ಕೊಟ್ಟು ಈಗ ನಾನು ನಿಮಗೆ ಕೇಳುವ ಅಂಶಗಳನ್ನು ಎಲ್ಲರೂ ಹಂಚಿಕೊಳ್ಳಬೇಕು, ಇದು ನಿಮಗೆ ಗೊತ್ತಿಲ್ಲದೆ ಇರೋದೇನಲ್ಲ, ಹಿಂಜರಿಕೆ ಇಲ್ಲದೆ ಮಾತನಾಡಿ ಎಂದು ಹೇಳಿ,  ಈ ಕೆಳಗಿನ ಪ್ರಶ್ನೆ ಕೇಳಿ,


ಪ್ರಶ್ನೆ ೦೧: ನಿಮಗೆ ಅಥವ ನಿಮ್ಮ ವಯಸ್ಸಿನ ಹುಡುಗಿಯರಿಗೆ ಅವರವರ ಮನೆಗಳಲ್ಲಿ ಬರುವ ಸವಾಲುಗಳು ಅಥವ ಸಮಸ್ಯೆಗಳು ಏನು? (ಅವರು ಮನೆಯ ಸಮಸ್ಯೆಗಳನ್ನು ಹೇಳದ ಹಾಗೆ, ಅವರ ‘ವಯಸ್ಸಿನಿಂದಾಗಿ’ ಬರುವ ಸವಾಲುಗಳನ್ನು ಹೇಳುವ ಹಾಗೆ ಫೆಸಿಲಿಟೇಟರ್ ನೋಡಿಕೊಳ್ಳಬೇಕು)

ಪ್ರತಿಯೊಬ್ಬರೂ ಇದಕ್ಕೆ ಉತ್ತರ ನೀಡುವ ಹಾಗೆ ಪ್ರೋಬ್ ಮಾಡಿ. ಅವರು ಹೇಳುವ ಉತ್ತರ ಮನೆಯ ಕಾಲಮ್ ನಲ್ಲಿ ಬರೆದುಕೊಳ್ಳಿ. (ಗಮನಿಸಿ: ಅವರು ಹಂಚಿಕೊಳ್ಳುವುದರ ಬಗ್ಗೆ ಹೆಚ್ಚಿನ ಫೋಕಸ್ ಇರಬೇಕು ಇಲ್ಲವೆಂದಲ್ಲಿ ನೀವು ಬರೆಯುವುದಕ್ಕೆ ಅವರು ಹೇಳುತ್ತಿದ್ದಾರೆ ಎನ್ನುವ ವೈಬ್ ಸೆಟ್ ಆಗುತ್ತದೆ. “ನಾನು ಬರ್ಕೋತೀನಿ, ನೀವು ಹೇಳ್ತಾ ಹೋಗಿ” ಎಂದು ಅವರು ನಿಮ್ಮ ಬರಹದ ಮೇಲೆಯೇ ಗಮನ ಕೇಂದ್ರೀಕರಿಸದ ಹಾಗೆ ನೋಡಿಕೊಳ್ಳಬೇಕು)


ಪ್ರಶ್ನೆ ೦೨: ನಿಮಗೆ ಅಥವ ನಿಮ್ಮ ವಯಸ್ಸಿನ ಹುಡುಗಿಯರಿಗೆ ಮನೆಯಿಂದ ಶಾಲೆಗೆ ಹೋಗುವ ದಾರಿಯಲ್ಲಿ (ನಡೆಯುವಾಗ, ಬಸ್ ಸ್ಟಾಪ್, ಬಸ್, ಮೆಟ್ರೋ, ಟೂ ವೀಲರ್ ಡ್ರಾಪ್ ಇತ್ಯಾದಿ) ಬರುವ ಸವಾಲುಗಳೇನು ? (ಅವರಿಗೆ ಅರ್ಥವಾಗುವ ಹಾಗೆ ವಿವರಿಸಿ - ಮತ್ತೆ ಅವರ ಗಮನ ಯಾವ್ಯಾವುದೋ ಸಮಸ್ಯೆಗಳ ಕಡೆಗೆ ಹೋಗದಂತೆ, ಅವರ ‘ವಯಸ್ಸಿನ’ ಆಧಾರವಾಗಿ ಬರುವ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುವಂತೆ ನೋಡಿಕೊಳ್ಳಿ)

ಪ್ರಶ್ನೆ ೦೩: ನಿಮಗೆ ಅಥವ ನಿಮ್ಮ ವಯಸ್ಸಿನ ಹುಡುಗಿಯರಿಗೆ ಶಾಲೆಯಲ್ಲಿ ಬರುವ ಸಮಸ್ಯೆಗಳೇನು? (ಶಾಲೆಯ ಸಮಸ್ಯೆಗಳನ್ನು ಹೇಳುವಾಗ ಹಿಂಜರಿಕೆ ಸಹಜವಾದದ್ದು. ಅವರಿಗೆ ‘ನಿಮ್ಮ ಹಂಚಿಕೆಯನ್ನು ನಾವು ಯಾವ ಶಿಕ್ಷಕರೊಂದಿಗೂ ಹಂಚಿಕೊಳ್ಳುವುದಿಲ್ಲ ಎನ್ನುವ ಭರವಸೆ ಮೂಡಿಸಬೇಕು ಹಾಗೆಯೇ ಶಾಲೆಯ ಸಮಸ್ಯೆಯಲ್ಲ, ಅವರ ‘ಶಾಲೆಯಲ್ಲಿ ಅವರ ವಯಸ್ಸಿನವರಿಗಾಗುವ ಸಮಸ್ಯೆ’ ಎನ್ನುವುದನ್ನು ಸ್ಪಷ್ಟಪಡಿಸಿ)  


ಕಿಶೊರಿಯರು ಹೇಳುವುದನ್ನ ೩ ಕಾಲಮ್ ಮಾಡಿ ಬರೆದುಕೋಂಡು, ಬೆಕಾದಲ್ಲಿ prompt ಮಾಡಿ.                                                                (೩೦ ನಿಮಿಷ)

ಇದಾದ ನಂತರ, ಮುಂದಿನ ವಾರ ಇವುಗಳ ಬಗ್ಗೆ ಮಾತನಾಡೋಣ, ನಮಸ್ಕಾರ  ಎಂದು ಮಾತುಕತೆಯನ್ನು ಮುಗಿಸುವುದು

ಒಟ್ಟೂ ಸಮಯ

೪೦ ನಿಮಿಷಗಳು

ಒಟ್ಟೂ ಫೆಸಿಲಿಟೇಟರ್‌ಗಳು: ೪

ಬೇಕಾಗಿರುವ ಸಂಪನ್ಮೂಲಗಳು

ಚಾರ್ಟ್‌ಶೀಟ್‌ಗಳು - ೫

ಸ್ಕೆಚ್‌ ಪೆನ್‌ಗಳು -

ಕ್ಯಾಮೆರ

ಇನ್‌ಪುಟ್‌ಗಳು

ಔಟ್‌ಪುಟ್‌ಗಳು

Kishori’s writing about  adolescence issues