STF 2015-16 Koppala

From Karnataka Open Educational Resources
Jump to navigation Jump to search

Science

Batch 1

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here
ಮೊದಲ ದಿನ : ದಿನಾಂಕ : 08-09-2015 ರಂದು ಎಸ್.ಟಿ.ಎಫ್.ತರಬೇತಿ 2015ರ ಮೊದಲನೇ ಬ್ಯಾಚ್ ಕೊಪ್ಪಳ ಡಯಟ್ ನಲ್ಲಿ ಪ್ರಾರಂಭವಾಯಿತು.ಈ ತರಬೇತಿಯ ಉದ್ಘಾಟನೆಯನ್ನು ಕೊಪ್ಪಳ ಜಿಲ್ಲಾ ಡಯಟ್ ನ ಪ್ರಾಂಶುಪಾಲರಾದ ಮಾನ್ಯಶ್ರೀ ಪರಮೇಶ್ವರ ರವರು ,ಎಸ್.ಟಿ.ಎಫ್ ನೋಡಲ್ ಅಧಿಕಾರಿಗಳಾದ ಶ್ರೀ ಕೃಷ್ಣ ಉಪನ್ಯಾಸಕರು ,ಶ್ರೀ ವಿರುಪಾಕ್ಷಯ್ಯ ಉಪನ್ಯಾಸಕರು ತರಬೇತಿಗೆ ಚಾಲನೆ ನೀಡಿದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಜ್ಞಾನ ,ಕಂಪ್ಯೂಟರ್ ಬಳಕೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಗುಣಮಟ್ಟ ಶಿಕ್ಷಣಕ್ಕೆ ಶಿಕ್ಷಕರು ಶ್ರಮಿಸಬೇಕೆಂದು ಕರೆ ನೀಡಿದರು ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಮೇಶ ಶಿಲ್ಪಿ ಇವರು 2015ರ ಎಸ್.ಟಿ.ಎಫ್.ಕಾರ್ಯಕ್ರಮದ ಮುಖ್ಯ ಧ್ಯೇಯವಾದ ವಿಜ್ಞಾನ ಪ್ರಯೋಗಾಲಯವನ್ನು ಸಕ್ರಿಯಗೊಳಿಸಿ ಸರಳ ಪ್ರಯೋಗಗಳ ಮೂಲಕ ವಿಜ್ಞಾನ ಪರಿಕಲ್ಪನೆಗಳನ್ನು ಸ್ಪಷ್ಟಪಡಿಸುವುದರ ಜೊತೆಗೆ ಸರಳ ಪ್ರಯೋಗಗಳನ್ನು ವಿದ್ಯಾರ್ಥಿಗಳೇ ಸ್ವತಃ ಮಾಡುವ ಸಾಮರ್ಥ್ಯ ಬೆಳೆಸುವುದು ಶಿಕ್ಷಕರ ಕರ್ತವ್ಯವಾಗಿದೆ ಎಂದು ಪ್ರಸೆಂಟೇಶನ್ ಬಳಸಿ ವಿವರಿಸಿದರು.ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಯೋಗೆಪ್ಪ ಇವರು ಉಬುಂಟು ಪರಿಚಯ ಅದರ ಮಹತ್ವವನ್ನು ತಿಳಿಸಿದರು.ಹೊಸದಾಗಿ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆಗೆ ಸೇರಬಯಸುವ ಶಿಕ್ಷಕರಿಗೆ ಇ-ಮೇಲ್ ಅಕೌಂಟ್ ರಚನೆ ,ಇ-ಮೇಲ್ ಕಳುಹಿಸುವುದು ಹಾಗೂ ತೆರೆಯುವುದು ,,ಇಮೇಜ್ ಡೌನಲೋಡ ಮಾಡುವುದು , ಫೋಲ್ಟರ್ ರಚನೆ, ಟೆಕ್ಸ್ತ್ ಪಾರ್ಮ್ಯಾಟ್ ಮುಂತಾದ ವಿಷಯಗಳ ಬಗ್ಗೆ ರಮೇಶ ರವರು ತಿಳಿಸಿದರು.
ಎರಡನೇ ದಿನ : ದಿನಾಂಕ: 09-09-2015 ರಂದು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಮೇಶ ಶಿಲ್ಪಿ ಹಾಗೂ ಶಿವಯೋಗೆಪ್ಪ ಇವರಗಳು ಕೊಯರ್ ನ ಮುಖಪುಟಗಳ ವೀಕ್ಷಣೆ , ವಿಜ್ಞಾನ ವಿಷಯಗಳ ಬಗ್ಗೆ ಕೊಯರ್ ನಲ್ಲಿ ಸೇರಿಸಿರುವ ಸಂಪನ್ಮೂಲಗಳನ್ನು ವೀಕ್ಷಿಸಿಸುವುದು ,ಉಬುಂಟುವಿನಲ್ಲಿ ಕನ್ನಡ ಟೈಪ್ ಮಾಡುವ ವಿಧಾನ , ವಿಜ್ಞಾನ ಪ್ರಯೋಗವಾದ ಬಾಯ್ಲನ ನಿಯಮದ ಚಟುವಟಿಕೆಯ ಒಂದು ಮಾದರಿಯನ್ನು ತೋರಿಸಿದರು.ಶಿಬಿರಾರ್ಥಿಗಳ ತಂಡ ರಚಿಸಿ ಪ್ರತಿ ತಂಡದವರು ವಿಜ್ಞಾನ ಚಟುವಟಿಕೆಯ ಮಾದರಿ ತಯಾರಿಸಿ ಪ್ರಸ್ತುತ ಪಡಿಸಲು ತಿಳಿಸಿದರು.ಪ್ರಯೋಗಕ್ಕೆ ಅಗತ್ಯವಾದ ಸಲಕರಣೆಗಳನ್ನು ಸ್ವತಃ ಶಿಭಿರಾರ್ಥಿಗಳೇ ಪಟ್ಟಿ ಮಾಡಿ ಮೂರನೇ ದಿನ ತರಬೇತಿಗೆ ಸಿದ್ಧಪಡಿಸಿದರು.ಕೊಯರ್ ವೆಬ್ ಪುಟ್ ಗಳ ವೀಕ್ಷಿಸಲು ಪ್ರಾಯೋಗಿಕಕ್ಕೆ ಅನವು ಮಾಡಿಕೊಡಲಾಯಿತು. ಮೂರನೇ ದಿನ :ದಿನಾಂಕ : 10-09-2015 ರಂದು ಸ್ವತಃ ಶಿಭಿರಾರ್ಥಿಗಳೆ ಸಿದ್ಧಪಡಿಸಿಕೊಂಡ ವಿಜ್ಞಾನ ಚಟುವಟಿಕೆಯ ಸರಳ ಪ್ರಯೋಗಗಳ ಸಾಮಗ್ರಿಗಳನ್ನು ಜೋಡಿಸಿ ಪ್ರಯೋಗಕ್ಕೆ ಸಿದ್ಧವಾದರು.ಶ್ರೀಶಿವಯೋಗೆಪ್ಪ ಇವರ ಕ್ಯಾಮೆರ ಕಣ್ಣನಲ್ಲಿ ಸುಮಾರು ೧೦ ತಂಡಗಳ ವಿವಿಧ ವಿಜ್ಞಾನ ಚಟುವಟಿಕೆಗಳ ಪ್ರಯೋಗಗಳ ವಿಡಿಯೋಗಳನ್ನು ರೆಕಾರ್ಡ್ ಮಾಡಿದರು.ನಂತರ ಫ್ರೀ ಮೈಂಡ್ ಬಳಕೆ , ಹಾಗೂ ವಿಜ್ಞಾನ ವಿಷಯ ಬೋಧನೆಯಲ್ಲಿ ಶಿಕ್ಷಕರು ಎದುರಿಸುವ ಸವಾಲಗಳೇನು ಎನ್ನುವುದರ ಬಗ್ಗೆ ರಮೇಶ ಶಿಲ್ಪಿ ಇವರು ಶಿಕ್ಷಕರನ್ನು ಚರ್ಚೆಗೆ ಒಳಪಡಿಸದರು.
ನಾಲ್ಕನೇ ದಿನ : ದಿನಾಂಕ : 11-09-2015ರಂದು ಪೇಟ್ ಸೆಮುಲೇಶನ್ ಗಳನ್ನು ವಿಜ್ಞಾನ ವರ್ಗಕೋಣೆ ಬೋಧನೆಯಲ್ಲಿ ಬಳಸುವ ವಿಧಾನ ಹಾಗೂ ಸಿಮುಲೇಶನ್ ಗಳನ್ನು ವಿಜ್ಞಾನದ ಒಂದು ಮೌಲ್ಯಮಾಪಪನ ಸಾಧನವಾಗಿ ಬಳಸುವುದು ಹೇಗೆ ? , ವಿಜ್ಞಾನವನ್ನು ಪರಿಣಾಮಕಾರಿಯಾಗಿಸಲು ಬಳಸುವ ವಿವಿಧ ವಿಧಾನಗಳು ಯಾವುವು ? ಎನ್ನುವುದರ ಚರ್ಚೆ , ಇವುಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ತಿಳಿಸಿದರು.
ಐದನೇ ದಿನ : ದಿನಾಂಕ : 12-09-2015ರಂದು ಶಿಕ್ಷಕರು ತಯಾರಿಸಿದ ವಿಜ್ಞಾನ ಚಟುವಟಿಕೆಯ ವಿಡಿಯೋಗಳನ್ನು ಎಡಿಟ್ ಮಾಡುವುದು , ಉಬುಂಟು ಇನಸ್ಟಾಲ್ ಮಾಡುವ ಬಗೆ ಇವುಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ತಿಳಿಸಿದರು.

Batch 2

Agenda

If district has prepared new agenda then it can be shared here

See us at the Workshop

Workshop short report

ಮೊದಲನೇ ದಿನ  : ದಿನಾಂಕ :೨೧/೦೯/೨೦೧೫ನೇ ಸೋಮವಾರ ಬೆಳಿಗ್ಗೆ ೧೦:೦೦ ಉದ್ಘಾಟನೆಯನ್ನು ಮಾನ್ಯ ಪ್ರಾಚಾರ್ಯರಾದ ಶ್ರೀ ಪರಮೇಶ್ವರ.ಬಿ ಯವರು ನೆರವೇರಿಸಿ ತಂತ್ರಜ್ಞಾನದ ಬೆಳವಣಿಗೆ ಮತ್ತು ಶಿಕ್ಷಣದಲ್ಲಿ ಹೇಗೆ ಬಳಸಬೇಕೆಂದು ಹೇಳುತ್ತಾ, ತರಗತಿಯ ಬೋಧನೆಯಲ್ಲಿ ತಂತ್ರಜ್ಞಾನದ ಬಳಕೆ ಮಾಡಲು ತಿಳಿಸಿದರು. ಸದರಿ ಕಾಯ9ಕ್ರಮದಲ್ಲಿ ಶ್ರೀ ವಿರುಪಾಕ್ಷಯ್ಯ ಹಿರಿಯ ಉಪನ್ಯಾಸಕರು ಮಾತನಾಡಿ, ಶಿಕ್ಷಕರು ನಿಮ್ಮ ಶಾಲೆಯಲ್ಲಿರುವ ಗಣಕಯಂತ್ರ ಲ್ಯಾಬ್ ಮತ್ತು ಉಬಂಟು ತಂತ್ರಜ್ಞಾನದ ಬಳಸಿಕೊಂಡು ಪರಿಣಾಮಕಾರಿಯಾಗಿ ಬೋಧಿಸಲು ತಿಳಿಸಿದರು. ಶ್ರೀಮತಿ ರೇಖಾ ಹಿರಿಯ ಉಪನ್ಯಾಸಕರು ಉಪಸ್ಥಿತರಿದ್ದರು. ಸದರಿ ಕಾರ್ಯಕ್ರಮವನ್ನು ಶ್ರೀ ಜೋಷಿ ಶಿಕ್ಷಕರು ನಿರೂಪಿಸಿದರು. ಹಾಗು ಶ್ರೀ ಶಿವಯೋಗಿ ವಂದಿಸಿದರು.ಶ್ರೀ ಶಿವಯೋಗಪ್ಪ ಸಂಪನ್ಮೂಲ ವ್ಯಕ್ತಿಗಳು ಉಬಂಟು ತಂತ್ರಜ್ಞಾನದ ಬೆಳವಣಿಗೆ ಹಾಗು ಗಣಕಯಂತ್ರ ಖರೀದಿಸುವಾಗ ಗಮನಿಸಬೇಕಾದ ಮುಖ್ಯ ವಿಷಯಗಳ ಬಗ್ಗೆ ಚರ್ಚೆ ಮಾಡಿದರು.ನಂತರ ಶ್ರೀ ರಮೇಶ ಶಿಲ್ಪಿ ಸಂಪನ್ಮೂಲ ವ್ಯಕ್ತಿಗಳು ಕೊಯರ ಬಳಕೆ ಮಾಡುವುದು ಹಾಗೂ ಮಾಹಿತಿಯನ್ನು ಬಳಸುವ ಬಗ್ಗೆ ಮತ್ತು ಸೇರಿಸುವ ಬಗ್ಗೆ ತಿಳಿಸಿದರು.ನಂತರ ಶ್ರೀ ಶಿವಯೋಗಪ್ಪ ಸಂಪನ್ಮೂಲ ವ್ಯಕ್ತಿಗಳು ಇ-ಮೇಲ್ ರಚಿಸುವುದು-ಬಳಕೆ ವಿಷಯ ವೇದಿಕೆಗೆ ಸೇರ್ಪಡೆಯಾಗುವುದನ್ನು ತಿಳಿಸಿದರು.ನಂತರ ಎಲ್ಲಾ ಶಿಕ್ಷಕರು ತಮ್ಮ ಇ- ಮೇಲ್ ಗಳನ್ನು ಖುಷಿಯಿಂದ ಕಲಿತರು. ಎರಡನೇ ದಿನ  : ದಿನಾಂಕ: 22.09.2015ರಂದು ಎಸ್.ಟಿ.ಎಫ್. ತರಬೇತಿಯ 2ನೇ ದಿನದ ವರದಿಯನ್ನು ತಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ. ದಿನಾಂಕ 21.09.2015ರ ಮೊದಲ ದಿನದ ವರದಿ ವಾಚನವನ್ನು ಗಂಗಾವತಿ ತಾಲೂಕಿನ ವಿಜ್ಞಾನ ಶಿಕ್ಷಕರಾದ ಶ್ರೀ ಹೇಮಂತರಾಜ ಸರಕಾರಿ ಪ್ರೌಢಶಾಲೆ ವೆಂಕಟಗಿರಿ ಇವರು ಮಾಡುವ ಮೂಲಕ ಎರಡನೇ ದಿನದ ತರಬೇತಿ ಪ್ರಾರಂಭವಾಯಿತು. ಈ ದಿನದ ತರಬೇತಿಯಲ್ಲಿ ಮೊದಲು ಸಂಪನ್ಮೂಲ ವ್ಯಕ್ತಿಯಾದ ಶ್ರೀ ರಮೇಶ ಶಿಲ್ಪಯವರು ಪ್ರಯೋಗಗಳನ್ನು ಹೇಗೆ ಮಾಡುವುದು ಅದಕ್ಕೆ ಅನುಸರಿಸಬೇಕಾದ ಅಂಶಗಳನ್ನು ತಿಳಿಸಿದರು. ಅದೇ ರೀತಿ ಪ್ರತಿಯೊಬ್ಬರಿಗೂ ಒಂದೊಂದು ಪ್ರಯೋಗಗಳನ್ನು ಆಯ್ಕೆಮಾಡಿಕೊಂಡು ಅದನ್ನು ಕೊಯರ್‍ನಲ್ಲಿ ಅಪ್‍ಲೋಡ್ ಮಾಡಲು ತಿಳಿಸಿದರು. ಎಲ್ಲಾ ಶಿಕ್ಷಕರು ಒಂದೊಂದು ಪ್ರಯೋಗಗಳನ್ನು ಆಯ್ಕೆಮಾಡಿಕೊಂಡು ತಯಾರಿಸಿಕೊಂಡು ಅದನ್ನು ಕೊಯರಗೆ ಅಪ್‍ಲೋಡ ಮಾಡಿದರು. ನಂತರ ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಯೋಗಪ್ಪ ಸರಕಾರಿ ಪ್ರೌಢಶಾಲೆ ತಾಳಕೇರಿ ಇವರು ಗೂಗಲ್‍ನಿಂದ ಹೇಗೆ ಇಮೇಜ್‍ಗಳನ್ನು ಡೌನ್‍ಲೋಡ್ ಮಾಡುವುದು ಎಂಬುದನ್ನು ತಿಳಿಸಿದರು. ಮದ್ಯಾಹ್ನ ಊಟದ ನಂತರ ಮತ್ತೇ ಶ್ರೀ ರಮೇಶ ಶಿಲ್ಪಿಯವರು ವೆಬ್‍ಗಳ ಬಳಕೆ ಮತ್ತು ಅವುಗಳ ಮಹತ್ವ ತಿಳಿಸಿದರು. ಉಬುಂಟುವಿನ ಮತ್ತೊಂದು ಸಾಫ್ಟವೇರ್ ಫ್ರೀ ಮೈಂಡ್ ಮ್ಯಾಪ್ ಹೇಗೆ ಬಳಸಿಕೊಳ್ಳುವುದು ಇದರಿಂದ ಪ್ಲೋಚಾರ್ಟ್ ತಯಾರಿಕೆ ಸುಲಭ ಎಂಬುವುದನ್ನು ತೋರಿಸಿಕೊಟ್ಟರು. ತಾವು ತಯಾರಿಸಿಕೊಂಡ ಪ್ರಯೋಗಗಳನ್ನು ಎಲ್ಲಾ ತರಬೇತಿ ಶಿಕ್ಷಕರ ಮುಂದೆ ಶ್ರೀ ಕೃಷ್ಣಮೂರ್ತಿ ಭಟ್, ನ್ಯೂಟನ್ ಚಲನೆಯ ಎರಡನೇ ನಿಯಮದ ಮೇಲೆ ಹಾಗೂ ಶ್ರೀಮತಿ ವೇದಾವತಿ ಮೇಡಮ್‍ರವರು ಚಲನೆ ಮತ್ತು ದ್ರವ್ಯರಾಶಿಯ ಬಗ್ಗೆ, ಇನ್ನೊರ್ವ ಶಿಕ್ಷಕಿಯಾದ ಶ್ರೀಮತಿ ಜ್ಯೋತಿ ಮೇಡಮ್ ರಾಕೆಟ್‍ನ ಮೇಲೆ ಪ್ರಯೋಗಗಳನ್ನು ಮಾಡಿ ತೋರಿಸಿದರು. ಸಂಜೆ 5.30ಕ್ಕೆ ತರಬೇತಿಯನ್ನು ಅಂತ್ಯಗೊಳಿಸಿ ನಾಳೆಗೆ ಬೇಕಾಗುವ ಪ್ರಯೋಗಗಳಿಗೆ ಸಾಮಾನುಗಳನ್ನು ಹೊಂದಿಸಿಕೊಳ್ಳುವ ತಯಾರಿಯಲ್ಲಿ ಎಲ್ಲರೂ ತಮ್ಮ ತಮ್ಮ ಮನೆಗೆ ನಡೆದೆವು.

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Hindi

Batch 1

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.

Batch 2

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.

Batch 3

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.