ವಿಧ್ಯಾರ್ಥಿಗಳಿಗಾಗಿ ಐ.ಸಿ.ಟಿ ಪಠ್ಯಕ್ರಮ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೯:೩೨, ೧೪ ನವೆಂಬರ್ ೨೦೧೬ ರಂತೆ Venkatesh (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: '''4. ಭಾಗ 2; ವಿಧ್ಯಾರ್ಥಿಗಳಿಗಾಗಿ ಐ.ಸಿ.ಟಿ ಪಠ್ಯಕ್ರಮ''' ಶಾಲಾ ಶಿಕ್ಷಣದಲ್ಲಿ ಐ.ಸ...)
Jump to navigation Jump to search

4. ಭಾಗ 2; ವಿಧ್ಯಾರ್ಥಿಗಳಿಗಾಗಿ ಐ.ಸಿ.ಟಿ ಪಠ್ಯಕ್ರಮ

ಶಾಲಾ ಶಿಕ್ಷಣದಲ್ಲಿ ಐ.ಸಿ.ಟಿ ರಾಷ್ಟ್ರೀಯ ನೀತಿಯ ಮಾರ್ಗದರ್ಶನದಂತೆ, ವಿಧ್ಯಾರ್ಥಿಗಳಿಗಾಗಿ ಐ.ಸಿ.ಟಿ ಪಠ್ಯಕ್ರಮವು ಸೃಜನಶೀಲತೆ, ಸಮಸ್ಯೆ ಬಿಡಿಸುವಿಕೆ ಮತ್ತು ವಿಧ್ಯಾರ್ಥಿಗಳಿಗೆ ವೃತ್ತಿ ಆಯ್ಕೆಗಳನ್ನು ಸೂಚಿಸುವ ಮತ್ತು ಅವರ ಚಿಂತನಾ ವ್ಯಾಪ್ತಿಯನ್ನು ವಿಸ್ತರಿಸುವಂತಹ ನಿರ್ಧಿಷ್ಟ ಉದ್ದೇಶದೊಂದಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಮಕ್ಕಳಿಗೆ ಪರಿಚಯಿಸುವ ರೀತಿಯಲ್ಲಿ ವಿನ್ಯಾಸಗೊಂಡಿದೆ. ವಿಶೇಷವಾಗಿ ಈ ಪಠ್ಯಕ್ರಮವೂ ವಿಧ್ಯಾರ್ಥಿಗಳನ್ನು ವಿವಿಧ ಸಂಪನ್ಮೂಲಗಳೊಂದಿಗೆ ಕಾರ್ಯನಿರ್ವಹಿಸಲು ತರಬೇತಿ ನೀಡುವುದರ ಕಡೆಗೆ ಗಮನ ನೀಡುತ್ತದೆ. ಮಾಹಿತಿಯನ್ನು ಮತ್ತು ಸಂಪನ್ಮೂಲಗಳನ್ನು ಗಂಭೀರವಾಗಿ ಪರೀಕ್ಷಿಸುವುದನ್ನು ಕಲಿಯುವುದು; ಈ ಸಂಪನ್ಮೂಲಗಳನ್ನು ಸುರಕ್ಷಿತವಾಗಿ, ಉತ್ಪದಾಕವಾಗಿ, ಸೈದ್ದಾಂತಿಕವಾಗಿ ಮತ್ತು ನ್ಯಾಯಯುತವಾಗಿ ಬಳಸುದನ್ನು ಆಭ್ಯಾಸವಾಗಿಸುವುದು.

ವಿಧ್ಯಾರ್ಥಿಗಳಿಗೆ ತರಗತಿ ಹೊರಗಿನ ಸಂದರ್ಭದಲ್ಲಿ ಐ.ಸಿ.ಟಿಯನ್ನು ಪರಿಚಯಿಸಲಾಗಿದೆ. ಅವರ ಆಸಕ್ತಿ ಮತ್ತು ಕಲಿಯುಯ ಆಪೇಕ್ಷೆಯು ಅವರು ಐ.ಸಿ.ಟಿ ಚಟುವಟಿಲೆಗಳಲ್ಲಿ ಹೆಚ್ಚು ತೀವ್ರವಾಗಿ ಭಾಗವಹಿಸಲು ಪ್ರೇರೇಪಿಸುತ್ತದೆ. ಸಾಮಾಜಿಕ ಜಾಲತಾಣಗಳಿಗೆ ಮತ್ತು ಬ್ಲಾಗ್‌ಗಳಿಗೆ ಇವರನ್ನು ಪರಿಚಯಿಸುವುದು ಅನಿವಾರ್ಯವಾಗಿದೆ. ಇಂತಹ ಸಂದರ್ಭದಲ್ಲಿ ಸೈಬರ್‌ ಅಪರಾಧಗಳ ಬಗ್ಗೆ ಮತ್ತು ಇತರೇ ಮಾದರಿಯ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಇವರಿಗೆ ಅರಿವು ಮೂಡಿಸುವುದೇ ತರಭೇತಿಯ ಬಹುಮುಖ್ಯ ಭಾಗವಾಗಬೇಕು. ತಂತ್ರಾಂಶ ಮತ್ತು ಯಂತ್ರಾಂಶಗಳೊಡನೆ ಪ್ರಯೋಗಗಳನ್ನು ನಡೆಸುವಾಗಿನ ಕಲಿಕೆಯ ವಿಸ್ತಾರವಾದುದಾಗಿದೆ. ಬೋದನೆ ಮತ್ತು ಕಲಿಕಾ ಪ್ರಕ್ರಿಯೆಯಲ್ಲಿ ಈ ರೀತಿಯ ಪ್ರವೃತ್ತಿಗಳನ್ನು ಅಂತರ್ಗತಗೊಳಿಸುವುದು ಶಿಕ್ಷಕರು ಶಾಲೆಯಲ್ಲಿ ಐ.ಸಿ.ಟಿ ವ್ಯವಸ್ಥೆಯನ್ನು ಶಕ್ತಗೊಳಿಸಲು ಸಹಾಯಕವಾಗುತ್ತದೆ.

ವ್ಯಕ್ತಿತ್ವದ ಸರ್ವಾಂಗೀಣ ಬೆಳವಣಿಗೆಯಲ್ಲಿ ಐ.ಸಿ.ಟಿ ಯ ಪರಿಣಾಮವು ಅತ್ಯಂತ ಗಮನಾರ್ಹವಾದುದಾಗಿದೆ. ವಿಶೇಷವಾಗಿ ಸಂವಹನ ಕೌಶಲದ ಬೆಳವಣಿಗೆ ಮೇಲಿನ ಇದರ ಪರಿಣಾಮವು ಐ.ಸಿ.ಟಿ ಪಠ್ಯಕ್ರಮದ ಮುಖ್ಯ ಗುರಿಯಾಗಿದೆ.

ಭಾಷಾ ಮಿತಿಗಳು ಮತ್ತು ಬೇರ್ಪಡುವಿಕೆಗಳು ವಿದ್ಯಾರ್ಥಿಗಳು ವಿಸ್ತಾರವಾದ ವಿದ್ಯುನ್ಮಾನ ಮಾಹಿತಿಗಳನ್ನು ಮತ್ತು ಸಂಪನ್ಮೂಲಗಳನ್ನು ಲಭ್ಯತೆಗೆ /ಬಳಸಲು ಅಡ್ಡಿಯನ್ನುಂಟು ಮಾಡಬಹುದು. ದೈಹಿಕ ನ್ಯೂನತೆಯುಳ್ಳವರು, ವಿಶೇಷವಾಗಿ ದೃಷ್ಟಿದೋಷವುಳ್ಳವರು ಮತ್ತು ಶ್ರವಣದೋಷವುಳ್ಳವರಿಗೆ ಹೆಚ್ಚುವರಿ ಸಹಾಯದ ಅವಶ್ಯಕತೆ ಇರುತ್ತದೆ. ಈ ವ್ಯವಸ್ಥೆಯ ಬಗೆಗೆ ಗಂಭೀರವಾದ ಅರಿವು ಮೂಡಿಸುವ ಪ್ರಕ್ರಿಯೆಯು ವಿಧ್ಯಾರ್ಥಿಗಳ ಈ ಸಮಸ್ಯೆಗಳನ್ನು ಬಗೆಹರಿಸಲು ಸಹಾಯಕವಾಗುತ್ತವೆ.

ಐ.ಸಿ.ಟಿ ಮೂಲ ಸೌಲಭ್ಯಗಳ ಲಭ್ಯತೆ ಮತ್ತು ಶಾಲಾವೇಳಾಪಟ್ಟಿಯಲ್ಲಿ ಐ.ಸಿ.ಟಿ ತರಗತಿಗಳಿಗೂ ಅವಕಾಶಗಳ ಆಧಾರದ ಮೇಲೆ, ಬೇರೆ ಬೇರೆ ಶಾಲೆಗಳು ಅಥವಾ ಶಾಲಾ ಶಿಕ್ಷಣ ಮಂಡಳಿಗಳು ಐ.ಸಿ.ಟಿ ಕಾರ್ಯಕ್ರಮಗಳನ್ನು ಸೂಕ್ತವಾದ ತರಗತಿಗಳಿಗೆ ಪ್ರಾರಂಭಿಸಬಹುದು. ಆದರೆ ಶಾಲಾ ಶಿಕ್ಷಣದಲ್ಲಿ ಐ.ಸಿ.ಟಿ ಬಗೆಗಿನ ರಾಷ್ಟ್ರೀಯ ನೀತಿಯಲ್ಲಿ ಸೂಚಿತವಾಗಿರುವ ಕಲಿಕಾ ಹಂತಗಳನ್ನು ವಿಧ್ಯಾರ್ಥಿಯು ತನ್ನ ಶಾಲಾ ಅವಧಿಯಲ್ಲಿ ಪೂರ್ಣಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಈ ಪಠ್ಯಕ್ರಮವು ಐ.ಸಿ.ಟಿ ಯನ್ನು 6-12 ನೇ ತರಗತಿಯ ಮಕ್ಕಳಿಗೆ ಬಳಸಲು ಸೂಚಿಸುತ್ತದೆ. ಪ್ರಾಥಮಿಕ ಹಂತದ 1-5 ನೇ ತರಗತಿಯ ಮಕ್ಕಳಿಗೆ ಇದನ್ನು ಬಳಸಬಾರದಯು. ವ್ಯವಸ್ಥಿತ ಐ.ಸಿ.ಟಿ ಕಾರ್ಯಕ್ರಮವು ಪ್ರಾಥಮಿಕ ಹಂತದಲ್ಲಿ ಪ್ರಸ್ತುತವಾಗಿರುವುದಿಲ್ಲ ಹಾಗು ಕಲಿಕೆಗೆ ವಿರುದ್ದವಾಗಬಹುದು. ಈ ಪಠ್ಯಕ್ರಮವು ವಾರದಲ್ಲಿ ಮೂರು ತರಗತಿಗಳನ್ನು ಹಾಗು ವರ್ಷದಲ್ಲಿ ಮುವತ್ತು ವಾರಗಳನ್ನು ಕೋರ್ಸ್ ಪೂರ್ಣಗೊಳಿಸಲು ನಿರೀಕ್ಷಿಸುತ್ತದೆ. ಹಾಗು ಈ ಕೋರ್ಸ್ ಮೂರು ವರ್ಷಗಳ ಅವಧಿಯದ್ದಾಗಿರುತ್ತದೆ.

4.1 ಕಲಿಕಾ ಕಲಿಕಾ ಏಳೆಗಳು

ವಿಧ್ಯಾರ್ಥಿಗಳಿಗಾಗಿ ಐ.ಸಿ.ಟಿ ಪಠ್ಯಕ್ರಮವು ರಾಷ್ಟ್ರೀಯ ಪಠ್ಯಕ್ರಮದ ಗುರಿಗಳನ್ನು ಅರ್ಥೈಸಿಕೊಳ್ಳಲು ಇರುವ ನಿರ್ಧಿಷ್ಟವಾದ ಮಾದ್ಯಮವೆಂದು ಪರಿಗಣಿಸಲಾಗಿದೆ. ಇದು ವಿಧ್ಯಾರ್ಥಿಗಳನ್ನು ಚಲನಶೀಲತೆಗೆ, ಆಗಾಧವಾದ ಪರಿಣಿತ ಕ್ಷೇತ್ರಕ್ಕೆ, ವಿಸ್ತಾರವಾದ ಮಾಹಿತಿ ಮತ್ತು ಸಂಪನ್ಮೂಲಗಳಿಗೆ ಪರಿಚಯಿಸುತ್ತದೆ. ಹೊಸ ಹೊಸ ಅನ್ವೇಷಣೆಗಳಿಗೆ ಮತ್ತು ಭಾಗವಹಿಸುವಿಕಗೆ ವಿಧ್ಯಾರ್ಥಿಗಳನ್ನು ಪ್ರೇರೇಪಿಸುತ್ತದೆ.

ಇದು ಕೇವಲ ಕಲಿಕೆಗೆ ಮಾತ್ರ ಬೆಂಬಲ ನೀಡುವುದಿಲ್ಲ, ಇದರ ಜೊತೆಗೆ ವಿಧ್ಯಾರ್ಥಿಗಳ ಬುದ್ಧಿಶಕ್ತಿ ಮತ್ತು ಕಲ್ಪನೆಗೆ ಸವಾಲು ನೀಡುವಂತಹ ವಿಭಿನ್ನ ಚಟುವಟಿಕೆಗಳನ್ನು ಸಹ ಪರಿಚಯಿಸುತ್ತದೆ.

ಈ ನಿಟ್ಟಿನಲ್ಲಿ ಪಠ್ಯಕ್ರಮವು ನಾಲ್ಕು ಪ್ರಮುಖ ಕಲಿಕಾ ಎಳೆಗಳಾಗಿ ನಿರ್ವಹಣೆಗೊಂಡಿದೆ.

  1. ಪ್ರಪಂಚದೊಡನೆ ಸಂಪರ್ಕ
  2. ಪರಸ್ಪರರಲ್ಲಿ ಸಂಪರ್ಕ
  3. ಐ.ಸಿ.ಟಿ ಮೂಲಕ ರಚನೆ
  4. ಐ.ಸಿ.ಟಿ ಜೊತೆಗೆ ಪರಸ್ಪರ ಪ್ರತಿಕ್ರಿಯೆ

ಈ ಕಲಿಕಾ ಆಧಾರಗಳ ವ್ಯಾಪ್ತಿಯು ಶಿಕ್ಷಕರ ಪಠ್ಯಕ್ರಮದ ರೀತಿಯದ್ದೇ ಆಗಿರುತ್ತದೆ. ಚಟುವಟಿಕೆಗಳ ವಿಷಯದಲ್ಲಿ ಪಠ್ಯಕ್ರಮವು ವಿಧ್ಯಾರ್ಥಿಗಳ ವಯಸ್ಸು ಮತ್ತು ಅವರ ನಿರ್ಧಿಷ್ಟ ಅಗತ್ಯತೆ , ಉದ್ದೇಶಕ್ಕನುಗುಣವಾಗಿ ವಿಧ್ಯಾರ್ಥಿಗಳನ್ನು ಅವರ ಅವರ ಭವಿಷ್ಯಕ್ಕೆ ಸಜ್ಜುಗೊಳಿಸುವಂತೆ ಪಠ್ಯವಸ್ತುವನ್ನು ವಿಭಿನ್ನವಾಗಿ ಸ್ಪಷ್ಟಪಡಿಸುತ್ತದೆ.

4.2 ಪಠ್ಯಕ್ರಮ

ಐ.ಸಿ.ಟಿ ಪಠ್ಯಕ್ರಮವು ವಿಧ್ಯಾರ್ಥಿಗಳು ವಿವಿಧ ರೀತಿಯ ಐ.ಸಿ.ಟಿ ಸಾಧನಗಳು, ಪರಿಕರಗಳು, ಅನ್ವಯಕಗಳು, ಮಾಹಿತಿಗಳು ಮತ್ತು ಸಂಪನ್ಮೂಲಗಳೊಡನೆ ಕಾರ್ಯಪ್ರವೃತ್ತರಾಗುವುದಕ್ಕೆ ಶಕ್ತಗೊಳಿಸಲು ಪ್ರಯತ್ನಿಸುತ್ತದೆ. ಈ ಕೋರ್ಸ್ ವಾರದಲ್ಲಿ ಮೂರು ಅವಧಿಗಳಲ್ಲಿ ನಡೆಯುತ್ತದೆ. ಇದರಲ್ಲಿ ಒಂದು ಶಿಕ್ಷಕರಿಂದ ನಡೆಯುವ ತರಗತಿ ಹಾಗು ಎರಡು ಪ್ರಾಯೋಗಿಕ ತರಗತಿಗಳು ಒಳಗೊಂಡಿರುತ್ತವೆ. ಶಿಕ್ಷಕರ ತರಗತಿಯು ವಿವಿಧ ತಂತ್ರಗಳನ್ನು ಮತ್ತು ಪ್ರಕ್ರಿಯೆಗಳನ್ನು ಪರಿಚಯಿಸುವ ಮತ್ತು ಕಲಿಕೆಗೆ ಸಂದರ್ಭವನ್ನು ಒದಗಿಸುವ ಗುರಿಯನ್ನು ಹೊಂದಿರುತ್ತದೆ. ಇದು ಮುಂದುವರೆದಂತೆ ವಿಧ್ಯಾರ್ಥಿಗಳು ತಮ್ಮನ್ನು ತಾವು ಪ್ರಾಯೋಗಿಕ ಅನುಭವವನ್ನು ನೀಡಲು ವಿನ್ಯಾಸಗೊಳಿಸಿರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

4.2.1 ಉದ್ದೇಶಗಳು

ಈ ಕೋರ್ಸನಲ್ಲಿ ಪಾಲ್ಗೊಂಡ ನಂತರ ವಿಧ್ಯಾರ್ಥಿಗಳು ಈ ಕೆಳಕಂಡ ಅಂಶಗಳನ್ನು ಕಲಿಯಲು ಶಕ್ತರಾಗುತ್ತಾರೆ.

  1. ವಿಧ್ಯಾರ್ಥಿಗಳು ಬೆಳವಣಿಗೆಗೊಳ್ಳುತ್ತಿರುವ ವಿದ್ಯುನ್ಮಾನ ಸಮಾಜದಲ್ಲಿ ಉತ್ತಮ ವಿಧ್ಯಾರ್ಥಿಗಳಾಗಲು ಅವಶ್ಯಕವಾದ ವಿದ್ಯುನ್ಮಾನ ಸಾಕ್ಷರ ಕೌಶಲವನ್ನು ಅಭಿವೃದ್ದಿಪಡಿಸುವುದು.
  2. ಕಲಿಕೆಗಾಗಿ ಮತ್ತು ಕೌಶಲ ಬೆಳವಣಿಗೆಗಾಗಿ ವಿವಿಧ ಪರಿಕರಗಳು ಮತ್ತು ಅನ್ವಯಕಗಳ ಬಳಕೆ.
  3. ವಿವಿಧ ತಂತ್ರಾಂಶ ಮತ್ತು ಯಂತ್ರಾಂಶಗಳ ಸ್ವತಂತ್ರವಾಗಿ ಬಳಕೆ ಮಾಡುವುದು ಮತ್ತು ಕೆಲವು ಸಾಮಾನ್ಯವಾದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು,
  4. ಐ.ಸಿ.ಟಿ ಸೌಲಭ್ಯಗಳನ್ನು ಎಚ್ಚರಿಕೆಯಿಂದ ಬಳಸುವುದು, ತಮ್ಮ, ಇತರರ ಹಾಗು ಪರಿಕರಗಳ ಸುರಕ್ಷತೆಯನ್ನು ಖಾತರಿಪಡಿಸುವುದು.
  5. ಸೂಕ್ತವಾದ ಪರಿಕರಗಳು ಮತ್ತು ಅನ್ವಯಕಗಳನ್ನು ಬಳಸಿ ವಿವಿಧ ವಿದ್ಯುನ್ಮಾನ ಸಂಪನ್ಮೂಲಗಳನ್ನು ರಚಿಸುವುದು. ವಿದ್ಯುನ್ಮಾನ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವುದು, ಸಂಗ್ರಹಿಸುವುದು ಮತ್ತು ನಿರ್ವಹಣೆ ಮಾಡುವುದು.
  6. ಸುರಕ್ಷಿತ, ನೈತಿಕ ಮತ್ತು ಕಾನೂನು ಮಾರ್ಗದಲ್ಲಿ ಐ.ಸಿ.ಟಿ ಬಳಸುವುದು.

4.2.2 ಕಲಿಕೆಯ ನಿರ್ವಹಣೆ

ಮೂರು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಬೇಕಾದ ವಿಷಯಗಳ ತರಗತಿವಾರು ಹಂಚಿಕೆ.

4.2.2.1 ವರ್ಷ-೧ ಕನ್ನಡ ಅಕ್ಷರ ಬಳಕೆ (ಇಂಗ್ಲೀಷ್)

ಹಂಚಿಕೆ

ವಾರ 01-03 : ಕಾರ್ಯಕ್ರಮಿಸುವುದು (ಪ್ರೋಗ್ರಾಮಿಂಗ್ 01) ( ಪ್ರೋಗ್ರಾಮಿಂಗ್‌ ಮೇಲೆ ಕಾರ್ಯನಿರ್ವಹಿಸುವುದು ಉದಾ: ಲೋಗೋ, ಟರ್ಟಲ್ ಗ್ರಾಫಿಕ್ಸ್, ಅಥವಾ ಸ್ಕ್ರಾಚ್ ಅನಿಮೇಶನ್)

ವಾರ 04-05 : ಗ್ರಾಫಿಕ್ಸ್ 01 ( ಡಿಜಿಟಲ್ ಆರ್ಟ್ ಟೂಲ್. ಉದಾ: ಪ್ಲೋಪೈಂಟ್, ಮೈಪೈಂಟ್)

ವಾರ 06-07 : ಅಂತರ್ಜಾಲ ಮತ್ತು ಐ.ಸಿ.ಟಿ ವಾತಾವರಣ 01 ( ಯಂತ್ರಾಂಶ ಮತ್ತು ತಂತ್ರಾಂಶ, ಬ್ರೌಸಿಂಗ್)

ವಾರ 08-11 : ದತ್ತಾಂಶ ಪ್ರತಿನಿಧಿಸುವಿಕೆ ಮತ್ತು ಸಂಸ್ಕರಣೆ (ಡೇಟಾ ರೆಪ್ರೆಸೆಂಟೇಷನ್ ಮತ್ತು ಪ್ರೊಸೆಸಿಂಗ್ 01) ( ಸ್ಪ್ರೆಡ್‌ಶೀಟ್)

ವಾರ 12-13 : ಆಡಿಯೋ ವಿಷ್ಯುವಲ್ ಸಂವಹನ 01

ವಾರ 14-17 : ಪ್ರೋಗ್ರಾಮಿಂಗ್ 02 ( ಪ್ರೋಗ್ರಾಮಿಂಗ್‌ ಮೇಲೆ ಕಾರ್ಯನಿರ್ವಹಿಸುವುದು)

ವಾರ 18-21 : ಗ್ರಾಫಿಕ್ಸ್ 02 ( ಡಿಜಿಟಲ್ ಆರ್ಟ್ ಟೂಲ್)

ವಾರ 22-25 : ದತ್ತಾಂಶ ಪ್ರತಿನಿಧಿಸುವಿಕೆ 02 (ಪಠ್ಯ ಮತ್ತು ಚಿತ್ರಗಳು)

ವಾರ 26-27 : ದತ್ತಾಂಶ ಪ್ರತಿನಿಧಿಸುವಿಕೆ 03 ( ಲೇಔಟ್‌ ಮತ್ತು ಔಟ್‌ಪುಟ್‌)

ವಾರ 28-29 : ಆಡಿಯೋ ವಿಷ್ಯುವಲ್ ಸಂವಹನ 02

ವಾರ 30 : ಸಂಗ್ರಹಣೆ (ಪೋರ್ಟ್ ಪೋಲಿಯೋ) ಪ್ರದರ್ಶನ ಮತ್ತು ಮೌಲ್ಯಮಾಪನ

4.2.2.2 ವರ್ಷ - 02

ಹಂಚಿಕೆ

ವಾರ 01-03 : ಕಾರ್ಯಕ್ರಮಿಸುವುದು 03 (ಪ್ರೋಗ್ರಾಮಿಂಗ್ 03) ( ಪ್ರೋಗ್ರಾಮಿಂಗ್‌ ಮೇಲೆ ಕಾರ್ಯನಿರ್ವಹಿಸುವುದು)

ವಾರ 04-05 : ತಂತ್ರಾಂಶ ಅನ್ವಯಕಗಳು 01 ( ಮ್ಯಾಪ್ ಮತ್ತು ಗ್ಲೋಬ್‌)

ವಾರ 06-07 : ಅಂತರ್ಜಾಲ ಮತ್ತು ಐ.ಸಿ.ಟಿ ವಾತಾವರಣ 02 ( ವೆಬ್ ಸಂಪನ್ಮೂಲಗಳು, ಇಮೇಲ್)

ವಾರ 08-10 : ಡೇಟಾ ರೆಪ್ರೆಸೆಂಟೇಷನ್ ಮತ್ತು ಪ್ರೊಸೆಸಿಂಗ್ 04 ( ಸ್ಪ್ರೆಡ್‌ಶೀಟ್)

ವಾರ 11-12 : ಆಡಿಯೋ ವಿಷ್ಯುವಲ್ ಸಂವಹನ 03

ವಾರ 13-14 : ಪ್ರೋಗ್ರಾಮಿಂಗ್ 04 ( ಪ್ರೋಗ್ರಾಮಿಂಗ್‌ ಮೇಲೆ ಕಾರ್ಯನಿರ್ವಹಿಸುವುದು)

ವಾರ 15-16 : ತಂತ್ರಾಂಶ ಅನ್ವಯಕಗಳು 01 ( ಜಿಯೋಜೀಬ್ರಾ)

ವಾರ 17-20 : ಗ್ರಾಫಿಕ್ಸ್ ಮತ್ತು ಅನಿಮೇಷನ್ 03

ವಾರ 21-24 : ಡೇಟಾ ಪ್ರೊಸೆಸಿಂಗ್ 05 ( ಪಠ್ಯ ಮತ್ತು ಚಿತ್ರಗಳು)

ವಾರ 25-26 : ಡೇಟಾ ಪ್ರೊಸೆಸಿಂಗ್ 03 ( ಲೇಔಟ್‌ ಮತ್ತು ಔಟ್‌ಪುಟ್‌)

ವಾರ 27-29 : ಆಡಿಯೋ ವಿಷ್ಯುವಲ್ ಸಂವಹನ 04

ವಾರ 30 : ಪೋರ್ಟ್ ಪೋಲಿಯೋ ಪ್ರದರ್ಶನ ಮತ್ತು ಮೌಲ್ಯಮಾಪನ

4.2.2.3 ವರ್ಷ 03

ಹಂಚಿಕೆ

ವಾರ 01-02 : ತಂತ್ರಾಂಶ ಅನ್ವಯಕಗಳು 03

ವಾರ 03-04 : ತಂತ್ರಾಂಶ ಅನ್ವಯಕಗಳು 04

ವಾರ 05-06 : ತಂತ್ರಾಂಶ ಅನ್ವಯಕಗಳು 05

ವಾರ 07-08 : ತಂತ್ರಾಂಶ ಅನ್ವಯಕಗಳು 06

ವಾರ 09-10 : ತಂತ್ರಾಂಶ ಅನ್ವಯಕಗಳು 07

ವಾರ 11-12 : ಅಂತರ್ಜಾಲ ಮತ್ತು ಐ.ಸಿ.ಟಿ ವಾತಾವರಣ 03

ವಾರ 13-16 : ಪ್ರೊಜೆಕ್ಟ್‌ 01 (ವೆಬ್ ಸಂಪನ್ಮೂಲಗಳು)

ವಾರ 17-20 : ಪ್ರೊಜೆಕ್ಟ್‌ 02 (ಪ್ರೋಗ್ರಾಮಿಂಗ್)

ವಾರ 21-24 : ಪ್ರೊಜೆಕ್ಟ್‌ 03 (ಆಡಿಯೋ ವಿಷ್ಯುವಲ್ ಸಂವಹನ / ಗ್ರಾಫಿಕ್ಸ್ ಮತ್ತು ಅನಿಮೇಷನ್)

ವಾರ 25-28 : ಪ್ರೊಜೆಕ್ಟ್ 04 (ವೆಬ್ ಡೆವಲಪ್‌ಮೆಂಟ್ / ಅನ್ವಯಕಗಳ ಡೆವಲಪ್‌ಮೆಂಟ್‌)

ವಾರ 29 : ಅಂತರ್ಜಾಲ ಮತ್ತು ಐ.ಸಿ.ಟಿ ವಾತಾವರಣ 04

ವಾರ 30 : ಪೋರ್ಟ್ ಪೋಲಿಯೋ ಪ್ರದರ್ಶನ ಮತ್ತು ಮೌಲ್ಯಮಾಪನ

4.2.3 ಮೌಲ್ಯಮಾಪನ

ಈ ಕೋರ್ಸ್‌ನ ಪ್ರತಿ ತರಗತಿಅಧಿವೇಶನಗಳೂ ಶಿಕ್ಷಕರ ತರಗತಿಪ್ರಸ್ತುತಿಗಳನ್ನು ಗಳನ್ನು ಹಾಗೇಯೇ ಪ್ರಾಯೋಗಿಕ ಚಟುವಟಿಕೆಗಳನ್ನು ತರಗತಿಗಳನ್ನು ಒಳಗೊಂಡಿರುತ್ತವೆ. ಈ ಸಮಯದಲ್ಲಿ ವಿಧ್ಯಾರ್ಥಿಗಳು ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾರೆ.

ಪ್ರತಿ ಚಟುವಟಿಕೆಗಳು ಒಂದಕ್ಕೊಂದು ಸಂಭಂದಿಸಿದವಾಗಿದ್ದು ಪೋರ್ಟ್‌ಪೋಲಿಯಾ ದಲ್ಲಿ ದಾಖಲಾಗುತ್ತವೆ. ವಿಧ್ಯಾರ್ಥಿಗಳು ಈ ಕೋರ್ಸ್‌ನ ಭಾಗವಾಗಿ ಹಲವು ಕಾರ್ಯಯೋಜನೆಗಳನ್ನು ( assignments) ಸಲ್ಲಿಸಬೇಕು. ಇವು ವ್ಯಾಪಕ ಮತ್ತು ನಿರಂತರ ಮೌಲ್ಯಮಾಪನಕ್ಕೆ ಎಡೆ ಮಾಡಿಕೊಡುತ್ತವೆ. ಪ್ರತಿಯೊಬ್ಬರ ಪ್ರಗತಿಯನ್ನು ಪರಿಣಾಮಸುಧಾರಣೆಗೊಳಿಸಲು ಅವಕಾಶಗಳನ್ನು ಇಲ್ಲಿ ಸೇರಿಸಲಾಗಿರುತ್ತದೆ. ಪ್ರತಿ ವರ್ಷದ ಕೊನೆಯಲ್ಲಿ ಸಂಕಲನಾತ್ಮಕ ಮೌಲ್ಯಮಾಪನವನ್ನು ವಿನ್ಯಾಸಮಾಡಲಾಗುತ್ತದೆ. ಈ ಮೌಲ್ಯಮಾಪನವು ಆ ವರ್ಷದಲ್ಲಿ ಮಾಡಿದ ಕಾರ್ಯಗಳ ಪ್ರಸ್ತುತಿ ಮತ್ತು ಸಹವರ್ತಿ ವಿಶ್ಲೇಷಣೆಯನ್ನು ಒಳಗೊಂಡಿರುತ್ತದೆ. ಪೋರ್ಟ್‌ಪೋಲಿಯಾವು ಎಲ್ಲಾ ಕಲಿಕೆಯನ್ನು ಹಿಡಿದಿಡಲು ಪ್ರಯತ್ನಿಸುತ್ತದೆ ಮತ್ತು ಈ ಕೋರ್ಸ್‌ ಮೂಲಕ ಆ ಅವಧಿಯ ಸಂಕಲನಾತ್ಮಕ ಮೌಲ್ಯಮಾಪನವಕ್ಕೆ ಪೂರಕವಾಗಿರುತ್ತದೆ. ಅಭಿನಂದಿಸುತ್ತದೆ.

ಪ್ರಮಾಣೀಕರಣ

ಈ ಕೋರ್ಸ್‌ ತಕ್ಷಣಕ್ಕೆ ಎಲ್ಲಾ ಶಾಲೆಗಳಲ್ಲಿ ಲಭ್ಯವಿರುವುದಿಲ್ಲ, ಅಗತ್ಯವಿರುವ ಐ.ಸಿ.ಟಿ ಮೂಲಸೌಲಭ್ಯಗಳು ಲಭ್ಯವಿರುವುದಿಲ್ಲ, ರಾಜ್ಯ ಪ್ರೌಢಶಿಕ್ಷಣ ಮಂಡಳಿಯು ಪ್ರತ್ಯೇಕ ಪರೀಕ್ಷಾ ವ್ಯವಸ್ಥೆಯನ್ನು ಸೃಷ್ಟಿಸಬಹುದು. ಈ ಮೂಲಕ ಪ್ರಮಾಣಪತ್ರ ನೀಡಬಹುದು. ಎಲ್ಲಾ ಶಾಲೆಗಳು ಸಜ್ಜುಗೊಂಡ ಮೇಲೆ ಈ ಪ್ರಮಾಣ ಪತ್ರವು ಶಾಲಾ ಪ್ರಮಾಣ ಪತ್ರದ ಭಾಗವೇ ಆಗಬಹುದು.